ಡೈಲಿ ವಾರ್ತೆ: 14/ಆಗಸ್ಟ್/2024

ಬ್ರಹ್ಮಾವರ ಸಬ್ ಇನ್ಸ್ ಪೆಕ್ಟರ್ ಮಧು ಅವರಿಗೆ ಮುಖ್ಯಮಂತ್ರಿ ಪದಕ


ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಧು ಬಿ.ಇ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಗೌರವಕ್ಕೆ ಭಾಜನರಾಗಿದ್ದಾರೆ.
2016 ರಲ್ಲಿ ತರಬೇತಿ ಪಡೆದು 2017 ರಿಂದ ಪೊಲೀಸ್ ಇಲಾಖೆಗೆ ಸೇರಿದ ಇವರು ಉಡುಪಿ ಜಿಲ್ಲೆಯ ಮಲ್ಪೆ, ಕಾರ್ಕಳ, ಕೋಟ, ಶಂಕರನಾರಾಯಣ ಮತ್ತು ಪ್ರಸ್ತುತ ಬ್ರಹ್ಮಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಲಾಖೆಯಲ್ಲಿ ಸಲ್ಲಿಸಿದ ಉತ್ತಮ ಸೇವೆಗೆ ಈ ಪದಕ‌ ಬಂದಿರುವುದು ಶ್ಲಾಘನೀಯ.


ರಾಜ್ಯದ 126 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು, ಅದರಲ್ಲಿ ಮಧು ಬಿ.ಇ. ಅವರೂ ಒಬ್ಬರು.