ಡೈಲಿ ವಾರ್ತೆ: 15/ಆಗಸ್ಟ್/2024

ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)m:9632581508 “ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲೇಖನ ”

“ದೇಶಾದ್ಯಂತ 78ರ ಸ್ವಾತಂತ್ರ್ಯ ಸಂಭ್ರಮ”
” ಸ್ವಾತಂತ್ರ್ಯ ಹೋರಾಟಗಾರರ ವೀರ ಮರಣದ ಗದ್ದುಗೆಯ ಮೇಲೆ ತ್ರಿವರ್ಣ ಧ್ವಜದ ಸಂಭ್ರಮ….!” ಬ್ರಿಟಿಷರ ನರ ಮೇದದ ಹಿಂಸಾಚಾರವು ನಮ್ಮವರ ಎದೆ ಸೀಳುತ್ತಿತ್ತು…,ಆದರೂ ಸ್ವಾತಂತ್ರ್ಯ ಪಡೆಯಲೇ ಬೇಕೆಂಬ ಕೆಚ್ಚೆದೆ ನಮ್ಮವರನ್ನ ಗಟ್ಟಿಗೊಳಿಸಿತ್ತು….!” ಭಾರತೀಯರ ಸಂಸ್ಕೃತಿಯ ಮುಂದೆ ಬ್ರಿಟಿಷರಿಗೆ ಸೋಲಾಯಿತು…!” ಅಂದೇ ಸ್ವಾತಂತ್ರ್ಯವಾಯಿತು ನಮ್ಮ ಜನ್ಮ ಭೂಮಿ…!” ಬೋಲೋ ಭಾರತ್ ಮಾತಾ ಕೀ…, ಜೈ…!”

ನಮ್ಮ ದೇಶ ಸ್ವಾತಂತ್ರ್ಯ ಪಡೆದು 78 ವರುಷಗಳೆ ಗತಿಸಿ ಹೋದವು.ಅಂದು ಹಿಂಸಾಚಾರದ ನರಮೇತದ ಕೃತ್ಯವು ಹೋರಾಟಗಾರರ ಮನಸ್ಸಿನಲ್ಲಿ ಅದು ಕನಸಾಗಿ ಉಳಿಯಿತು. ಹಿಂಸಾಚಾರ ಭುಗಿಲೆದ್ದಾಗ ಜೀವನವನ್ನ ಬಿಟ್ಟು ಜೀವವನ್ನು ಲೆಕ್ಕಿಸದೆ, ಸ್ವಾತಂತ್ರ್ಯಕ್ಕಾಗಿ ಹೋರಾಟದ ಹೋರಾಟದ ಕಿಚ್ಚು ನಮ್ಮಲ್ಲಿ ಹುದುಗಿ ಹೋಗಿತ್ತು. ಭಾರತೀಯರ ಸಂಸ್ಕೃತಿ ಆಚಾರ ವಿಚಾರಗಳು ಬ್ರಿಟಿಷರು ಸಹಿಸುತ್ತಿರಲಿಲ್ಲ ನಮ್ಮ ಸಂಸ್ಕೃತಿಯನ್ನ ಹೀನಾಯವಾಗಿ ಕೊಲ್ಲಲು ಮುಂದಾಗಿದ್ದು, ಅದು ನರಮೇದ ಕೃತ್ಯವಿಲ್ಲದೆ ಮತ್ತೇನು…? ಬ್ರಿಟಿಷ್ ದಬ್ಬಾಳಿಕೆಯಿಂದ ಸ್ವಾತಂತ್ರರಾದ ನಾವು ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು. ದೇಶ ದೇಶಗಳಲ್ಲಿ ಹುದುಗಿ ಹೋದಂತಹ ವೈರತ್ವದ ಭಾವನೆ ನಮ್ಮವರನ್ನ ಕೆರಳಿಸಿತ್ತು. ನಮ್ಮವರ ಮನಸ್ಸಿನಲ್ಲಿ ಅಂದು ಯಾರಿಗಾಗಿ ಈ ದೇಶ, ಹಾಗೂ ನಮದ್ದೇ ದೇಶ ಎನ್ನುದು, ಮತ್ತೊಮ್ಮೆ ನಮ್ಮವರಲ್ಲಿ ಸಾಬೀತಾಯಿತು. ಅದುವೇ ದೇಶದ ಸುಂದರ ಕ್ಷಣವೂ ಸ್ವಾತಂತ್ರ್ಯ ದಿನವಾಗಿ ಬೆಳಕು ಬಂದಿತು.

1947 ಆಗಸ್ಟ್ 15 ದೇಶ ಸಂಪೂರ್ಣವಾಗಿ ಸ್ವಾತಂತ್ರ್ಯ ವನ್ನು ಆಚರಿಸುತ್ತದೆ. ದೇಶದ ಮಹಾನ್ ವ್ಯಕ್ತಿಗಳಿಂದ ಸ್ವಾತಂತ್ರ್ಯ ಸಿಗುವುದರೊಂದಿಗೆ, ಭಾರತ ಸ್ವಾತಂತ್ರ್ಯವಾಗಿ ಪ್ರಕಾಶಮಾನವಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ದೇಶಕ್ಕಾಗಿ ತಮ್ಮ ಪ್ರಾಣ ವನ್ನು ಪಣಕಿಟ್ಟು ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸ್ವಾತಂತ್ರ್ಯದ ಮೊದಲು ಬ್ರಿಟಿಷರ ಕಪಿ ಮುಷ್ಟಿ ಯಲ್ಲಿ ದೇಶ ನಲುಗಿ ಹೋಗಿತ್ತು. ಒಂದೆಡೆ ಅಂದಕಾರ, ಇನ್ನೊಂದು ಬ್ರಿಟಿಷರ ದಬ್ಬಾಳಿಕೆಯಿಂದ ಭಾರತೀಯರಿಗೆ ಸ್ವತಂತ್ರವಿರಲಿಲ್ಲ. ಬ್ರಿಟಿಷರು ವ್ಯಾಪಾರ ಮಾರ್ಗವಾಗಿ ದೇಶದೊಳಗೆ ನುಗ್ಗಿ, ದೇಶದೊಳಗಿನ ಸಂಸ್ಕೃತಿ ಹಾಗೂ ಆಚಾರವಿಚಾರಗಳನ್ನು ಸಂಪೂರ್ಣವಾಗಿ ನಶಿಸಿ ಹಾಳು ಮಾಡುವ ಉದ್ದೇಶದಲ್ಲಿ ಮುಟ್ಟಿದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಭಾರತೀಯರು ಬಹಳಷ್ಟು ಕಷ್ಟಗಳನ್ನು ಪಟ್ಟು ತಮ್ಮ ತಮ್ಮ ಜೀವಿತಾವಧಿಯನ್ನು ಕಳೆಯಲು ಬೇಕಿತ್ತು. ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ ಹಾಗೂ ಹಿಂಸಾಚಾರದ ಕೆಲವು ಘಟನೆಗಳು ಇಂದು ಭಾರತೀಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ. ದೇಶದಲ್ಲಿ ತಾಂಡವಾಡುತ್ತಿರುವಂತಹ ಹಿಂಸಾಚಾರ, ಭ್ರಷ್ಟಾಚಾರ,ಸಹಿಷ್ಣತೆ ಹಾಗೂ ಜನರ ಮೇಲಾಗುತ್ತಿರುವಂತಹ ದಬ್ಬಾಳಿಕೆ ಈ ದೇಶ ಇಂದಿಗೂ ಮರೆತಿಲ್ಲ. ಬ್ರಿಟಿಷರ ಕಪಿ ಮುಷ್ಟಿಯಲ್ಲಿ ಈ ದೇಶವನ್ನು ಹಾಗೂ ಇದರೊಂದಿಗೆ ಭವ್ಯ ಸಂಸ್ಕೃತಿಯನ್ನು ಕೂಡ ಹಾಳು ಮಾಡಿತ್ತು.
ಭಾರತವು ಸ್ವಾತಂತ್ರ್ಯ ಪಡೆಯುವ ಮುಂಚೆ ಅಂಧಕಾರ ಮತ್ತು ಭ್ರಷ್ಟಾಚಾರ ಮತ್ತು ಏನು ಸಂಸ್ಕೃತಿಯನ್ನು ಈ ದೇಶದಲ್ಲಿ ನೆಲೆಯೂರಲು ಬ್ರಿಟಿಷರು ಪ್ರಯತ್ನಪಟ್ಟಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಕಪಿಮುಷ್ಟಿಯಲ್ಲಿ ಭಾರತ ಹೇಗಾದರೂ ಮಾಡಿ ಉಳಿಸಿಕೊಳ್ಳುವ ಛಲದೊಂದಿಗೆ, ಮಹಾತ್ಮರು ಹೋರಾಡಿದ ಕ್ಷಣಗಳನ್ನು ಇಂದು ನಾವು ನೆನಪು ಮಾಡಿಕೊಳ್ಳಬಹುದು. ಅದೇ ರೀತಿ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನಜರಾಮರವಾಗಿ ಈ ದೇಶದಲ್ಲಿ ಉಳಿಸಲು ಹಲವು ಕಾರ್ಯಕ್ರಮಗಳು ಎಂದಿನಂತೆ ನಡೆಯುತ್ತಿದೆ.

1947 ಆಗಸ್ಟ್ 15 ಸ್ವಾತಂತ್ರ್ಯ ಪಡೆದ ದಿನ :
ಸುಧಾರಣೆಗಳಾದ ಮಾಂಟಾಗು-ಚೆಲ್ಮ್ಸ್‌ಫೋರ್ಡ್ ಸುಧಾರಣೆಗಳಿಂದ ಗುರುತಿಸಲ್ಪಟ್ಟಿತು, ಆದರೆ ಇದು ಜನಪ್ರಿಯವಲ್ಲದ ರೌಲಟ್ ಕಾಯಿದೆಯ ಜಾರಿಗೆ ಮತ್ತು ಭಾರತೀಯ ಕಾರ್ಯಕರ್ತರಿಂದ ಸ್ವ-ಆಡಳಿತಕ್ಕಾಗಿ ಕರೆ ನೀಡಿತು. ಈ ಅವಧಿಯ ಅಸಮಾಧಾನವು ಮೋಹನ್ ದಾಸ್ ಕರಮಚಂದ್ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಮತ್ತು ನಾಗರಿಕ ಅಸಹಕಾರದ ರಾಷ್ಟ್ರವ್ಯಾಪಿ ಅಹಿಂಸಾತ್ಮಕ ಚಳುವಳಿಗಳಾಗಿ ಹರಳುಗಟ್ಟಿತು.

1930 ರ ದಶಕದಲ್ಲಿ, ಸುಧಾರಣೆಯನ್ನು ಕ್ರಮೇಣ ಬ್ರಿಟಿಷರು ಶಾಸನಬದ್ಧಗೊಳಿಸಿದರು; ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮುಂದಿನ ದಶಕವು ರಾಜಕೀಯ ಪ್ರಕ್ಷುಬ್ಧತೆಯಿಂದ ಸುತ್ತುವರಿದಿತ್ತು.ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ಭಾಗವಹಿಸುವಿಕೆ, ಅಸಹಕಾರಕ್ಕಾಗಿ ಕಾಂಗ್ರೆಸ್‌ನ ಅಂತಿಮ ತಳ್ಳುವಿಕೆ ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್ ನೇತೃತ್ವದ ಮುಸ್ಲಿಂ ರಾಷ್ಟ್ರೀಯತೆಯ ಉನ್ನತಿ. ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯನ್ನು 1947 ರಲ್ಲಿ ಸ್ವಾತಂತ್ರ್ಯದ ಮೂಲಕ ಮುಚ್ಚಲಾಯಿತು. ವಸಾಹತುಶಾಹಿ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ರಕ್ತಸಿಕ್ತ ವಿಭಜನೆಯಿಂದ ಹದಗೊಂಡು ಹತೋಟಿಗೆ ಬಂತು. ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಸ್ವಾತಂತ್ರ್ಯದ ಸಮಾಜದಲ್ಲಿ ಬದುಕುತ್ತಿರುವ ಮತ್ತು ಬದುಕನ್ನು ಸುಂದರವಾಗಿ ಕಟ್ಟಿಕೊಂಡ ಎಲ್ಲರ ಬದುಕು ಈ ಸ್ವಾತಂತ್ರ್ಯೋತ್ಸವ ಸಂಭ್ರಮ ದಲ್ಲಿ ಸಮೃದ್ಧಿ ತರಲಿ.