ಡೈಲಿ ವಾರ್ತೆ: 15/ಆಗಸ್ಟ್/2024

ಜಾಮಿಯಾ ಮಸ್ಜಿದ್ ಕೋಟದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಧ್ವಜಾರೋಹಣ

ಕೋಟ: ಜಾಮಿಯಾ ಮಸ್ಜಿದ್ ಕೋಟ ದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಗುರುವಾರ ಬೆಳಿಗ್ಗೆ ಮಾಡಲಾಯಿತು.

ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹಣಗೈದರು. ಅವರು ಮಾತನಾಡಿ ದೇಶದ 78ನೇ ಸ್ವಾತಂತ್ರ್ಯದ ಸಂಭ್ರಮವನ್ನು ನಾವೆಲ್ಲರೂ ಒಟ್ಟಾಗಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ನಾನು ಸಂಸದನಾಗಿ ಪ್ರಥಮ ಬಾರಿಗೆ ಈ ರಾಷ್ಟ್ರ ಧ್ವಜವನ್ನು ನಮ್ಮೂರಿನ ಜಾಮಿಯಾ ಮಸ್ಜಿದ್ ಕೋಟದಲ್ಲಿ ಅರಳಿಸಿದ್ದೇನೆಂಬ ಸಂತೋಷ ನನಗಿದೆ.

78 ವರ್ಷಗಳ ಹಿಂದೆ ಈ ಜಾತಿ, ಧರ್ಮ, ವರ್ಗ ಎಲ್ಲವನ್ನು ಮರೆತು ಹಿರಿಯರ ಶ್ರಮ ಮತ್ತು ಬಲಿದಾನ ದಿಂದ ದೇಶಬಂಧು ಅನ್ನುವಂತ ಅವತ್ತಿನ ಸಿದ್ಧಾಂತಕ್ಕೆ ಇಂದು ಸ್ವಾತಂತ್ರ್ಯ ಸಿಕ್ಕಿ ನಾವೆಲ್ಲ ನೆಮ್ಮದಿಯ ಬದುಕನ್ನು ಕಾಣುವಂತ ಈ ದೇಶ ಸಮಗ್ರತೆ ಐಕ್ಯತೆ ರಾಷ್ಟ್ರೀಯತೆ ಮತ್ತು ಒಂದಾಗಿ ಬದುಕುವಂತಹ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಪ್ರತಿಯೊಬ್ಬ ಭಾರತೀಯ ನೆಮ್ಮದಿಯಿಂದ ಬದುಕುವಂತ ಒಳ್ಳೆಯ ಸಮಾಜ ನಿರ್ಮಾಣ ಮಾಡಿ ನನ್ನಿಂದ ಅನ್ಯರನ್ನು ಪ್ರೀತಿಸುವ ಹಾಗೂ ಗೌರವಿಸಿ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಗುಣಗಳನ್ನು ಅಳವಡಿಸಿಕೊಂಡು ಬಾಳಬೇಕೆಂದು ಹಾರೈಸಿದರು.

ಜಮಾತ್ ಕಮಿಟಿ ಸದಸ್ಯರಾದ ಇಬ್ರಾಹಿಂ ಸಾಹೇಬ್ ಕೋಟ ಸಂದೇಶ ನುಡಿ ನಮನವನ್ನಾಡಿದರು.

ಕಾರ್ಯಕ್ರಮದ ಸ್ವಾಗತವನ್ನು ಜಮಾತ್ ಕಮಿಟಿ ಉಪಾಧ್ಯಕ್ಷ ಎಂ. ವಾಹಿದ್ ಆಲಿ ನಿರ್ವಹಿಸಿದರು.
ಜಮಾತ್ ಕಮಿಟಿ ಕಾರ್ಯದರ್ಶಿ ಬಶೀರ್ ಕೆ. ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳು, ಮದರಸ ವಿದ್ಯಾರ್ಥಿಗಳು, ಜಮತ್ ಕಮಿಟಿ ಸದಸ್ಯರು, ಜಮತ್ ಬಾಂಧವರು ಉಪಸ್ಥಿತರಿದ್ದರು .