ಡೈಲಿ ವಾರ್ತೆ: 15/ಆಗಸ್ಟ್/2024

ಕೊಂಡಿಕೊಪ್ಪ: ಸ. ಕಿ. ಪ್ರಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕೊಂಡಿಕೊಪ್ಪ:ಸ. ಕಿ. ಪ್ರಾ. ಶಾಲೆ ಕೊಂಡಿಕೊಪ್ಪ ಇಲ್ಲಿ ೭೮ ನೇ ಸ್ವಾತಂತ್ರ್ಯ ದಿನಾಚರಣೆ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಎಂ ಎಸ್ ಹಿರೇಮಠ ಮಾತನಾಡಿ ದೇಶಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಿ ಪೂಜಿಸಬೇಕು ಹಾಗೂ ಅವರ ಚರಿತ್ರೆ ಓದಬೇಕು ಎಂದರು.

     ಹಿರಿಯರಾದ ಬಸವರಾಜ ದೊಡ್ಡಮನಿ ಹಾಗೂ ರಾಮಣ್ಣ ಬಾಣದ ಮಾತನಾಡಿ ದೇಶ ಭಕ್ತಿ ಮೈಗೂಡಿಸಿಕೊಂಡು ‌ಸನ್ಮಾರ್ಗದಲ್ಲಿ ಸಾಗಬೇಕು ಎಂದರು.

   ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸೈನಿಕರಾದ ನಾಗರಾಜ ಲಮಾಣಿ ಅವರಿಗೆ ಸನ್ಮಾನ ಮಾಡಲಾಯಿತು.

     ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈನಿಕರು ದೇಶ ಭಕ್ತಿ ಸೇವೆ ಈಶ ಸೇವೆ. ಕೆಲವು ಜನರಿಗಾಗಿ ಸಿಗುವ ಈ ಸೇವೆ ಬಹು ಜನರಿಗೆ ಉಪಕಾರಿ.ಈ ಊರು ಈ ನಾಡು ಈ ದೇಶ ನನ್ನ ಕಣಕಣದಲ್ಲೂ ತುಂಬಿದೆ. ನಾನು ಕಲಿತ ಈ ಶಾಲೆ ನನಗೆ ವಿದ್ಯೆ ನೀಡಿ ಪ್ರೀತಿಸಿದ ಈ ಶಾಲೆಯ ಮುಖ್ಯ ಗುರು ಎಂ ಎಸ್ ಹಿರೇಮಠ ನನ್ನ ತಂದೆ ತಾಯಿ ಈ ಊರಿನ ಗುರು ಹಿರಿಯರು ನನ್ನ ಸ್ನೇಹಿತ ಬಳಗಕ್ಕೆ ಸದಾ ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎನ್ ಎಫ್ ಸಜ್ಜನರ, ಗ್ರಾಪಂ ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ   ಶೋಭಾ ಲಮಾಣಿ ವಿಜಯಲಕ್ಷ್ಮಿ ವಾಲಿಕಾರ ರತ್ನಾ ದೊಡ್ಡಮನಿ ಗೂರಪ್ಪ ಲಮಾಣಿ ಪರಸಪ್ಪ ಲಮಾಣಿ ಬಸಣ್ಣ ಬನ್ನಿಮಟ್ಟಿ  ಸುರೇಶ್ ದೊಡ್ಡಮನಿ ಪತ್ರಕರ್ತ ಮಂಜು ರಾಠೋಡ ಮಲ್ಲೇಶ ಬಾಣದ ಷಣ್ಮುಖ ಹುಬ್ಬಳ್ಳಿ ಸಿದ್ದು ಯಂಗಾಡಿ ರಮೇಶ್ ದೊಡ್ಡಮನಿ ವರದರಾಜ ಬನ್ನಿಮಟ್ಟಿ ಮುಂತಾದವರು ಭಾಗವಹಿಸಿದ್ದರು.