ಡೈಲಿ ವಾರ್ತೆ: 15/ಆಗಸ್ಟ್/2024

ಫರಂಗಿಪೇಟೆ : ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ : ಫರಂಗಿಪೇಟೆಯ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ಇದರ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಎಫ್. ಧ್ವಜಾರೋಹಣ ನೆರೆವೇರಿಸಿದರು. ಮಸೀದಿ ಖತೀಬ್ ಝಕರಿಯಾ ದಾರಿಮಿ ದುಅ ನೆರವೇರಿಸಿದರು. ಇಸ್ಲಾಹುಲ್ ಮುಸ್ಲಿಮೀನ್ ಮದರಸ ಮುಖ್ಯ ಶಿಕ್ಷಕ ಇಸ್ಮಾಯೀಲ್‌ ಹನೀಫಿ ಸಜಿಪ ಪ್ರತಿಜ್ಞಾ ಬೋಧಿಸಿದರು, ಇಸ್ಲಾಹುಲ್ ಮುಸ್ಲಿಮೀನ್ ಮುದ್ರಸ ಅಧ್ಯಾಪಕರಾದ ಇಸ್ಮಾಯಿಲ್ ಕೌಸರಿ, ಅಬ್ದುರಹಿಮಾನ್, ಮಸೀದಿ ಕೋಶಾಧಿಕಾರಿ ಅಬ್ದುಲ್ ಮಜೀದ್‌, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ನಝೀರ್, ಎಫ್.ಎಚ್.ನಾಸರ್, ಹಂಝ , ಸಕ್ವೀರ್ ಮದರಸಾ ವಿದ್ಯಾರ್ಥಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಪ್ರಯುಕ್ತ ನಡೆಸಿದ ವಿವಿಧ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು

ವಿದ್ಯಾರ್ಥಿಗಳಾದ ರಾಝೀಕ್, ಇರ್ಫಾಝ್, ಹಾಫಿಳ್ ಹಾಗೂ ಅದ್ನಾನ್ ಸ್ವಾತಂತ್ರ್ಯದ ಕುರಿತಾದ ಪ್ರಬಂಧ ಮಂಡಿಸಿದರು. ಆದಮ್ ಅಸ್ಲಮಿ ‌ಸ್ವಾಗತಿಸಿ , ವಂದಿಸಿದರು.