ಡೈಲಿ ವಾರ್ತೆ: 15/ಆಗಸ್ಟ್/2024

ಹಿದಾಯತುಲ್ ಇಸ್ಲಾಂ ಅರಬಿಕ್ ಮದರಸ ಕೋಟ ಪಡುಕರೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಪಡುಕರೆ ಹಿದಾಯತುಲ್ ಇಸ್ಲಾಂ ಅರಬಿಕ್ ಮದರಸದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು.

ಮದರಸರ ಉಸ್ತಾದ್ ಹಾಗೂ MJM ಕೋಡಿಕನ್ಯಾಣ ಖತೀಬರಾದ JMA ಸಿದ್ದೀಕ್ ಸಖಾಫಿ ಅವರು ಧ್ವಜಾರೋಹಣಗೈದರು.
ಅವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಹಾಗೂ ಸ್ವಾತಂತ್ರದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ HIA ಮದ್ರಸ ಅಧ್ಯಾಪಕರಾದ ಮುಹಮ್ಮದ್ ಶಾಫಿ ಝುಹ್ರಿ, ಮುಹಮ್ಮದ್ ಶರೀಫ್ ಸಅದಿ ಉಸ್ತಾದರು, HIA-ಮದ್ರಸ ಅಧ್ಯಕ್ಷರು ಕೆ. ಇಸ್ಮಾಯಿಲ್, ಪ್ರ. ಕಾರ್ಯದರ್ಶಿ ರಾಹಿಲ್ ಇಬ್ರಾಹಿಂ, ಕೋಶಾಧಿಕಾರಿ ಸುಲೈಮಾನ್, MJM ಗೌರವಾಧ್ಯಕ್ಷರು KH ಮೂಸ ಬ್ಯಾರಿ, ಅಧ್ಯಕ್ಷರು ಬಿಕೆ ಇಸ್ಮಾಯಿಲ್ ಹಾಜಿ, ಪ್ರ. ಕಾರ್ಯದರ್ಶಿ ಕೆ. ಹುಸೇನ್, ಸ್ಥಳೀಯ ಜಮಾತಿನವರು ಪಾಲ್ಗೊಂಡಿದ್ದರು.
SBS ಕಾರ್ಯದರ್ಶಿ ಮುಹಮ್ಮದ್ ಸಿರಾಜ್ ಸ್ವಾಗತಿಸಿದರು. ಅಧ್ಯಕ್ಷರಾದ ಮುಹಮ್ಮದ್ ಶಾಝಿಲ್ ವಂದಿಸಿದರು.