ಡೈಲಿ ವಾರ್ತೆ: 15/ಆಗಸ್ಟ್/2024

ಸುರತ್ಕಲ್: ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ವತಿಯಿಂದ 78ನೇ ಸ್ವಾತಂತ್ರೋತ್ಸವ ಆಚರಣೆ

ಸುರತ್ಕಲ್ : (SDTU) ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಸುರತ್ಕಲ್ ಏರಿಯಾ ಇದರ ವತಿಯಿಂದ 78ನೇ ಸ್ವಾತಂತ್ರೋತ್ಸವ ಆಚರಣೆ ನಡೆಸಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು (SDTU) ಅಧ್ಯಕ್ಷರು ಕಬೀರ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ (SDTU) ಅಧ್ಯಕ್ಷರು ಉತ್ತರ ವಲಯ ಮಂಗಳೂರು ಫಯಾಜ್ ಕಾಟಿಪಳ್ಳ ಮಾತನಾಡಿ ಸ್ವಾತಂತ್ರೋತ್ಸವದ ಬಗ್ಗೆ ಸಂದೇಶ ನೀಡಿದರು, SDTU ವತಿಯಿಂದ ಸತತ ಮೂರನೇ ಬಾರಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಇಬ್ರಾಹಿಂ ರವರಿಗೆ ಸನ್ಮಾನಿಸಲಾಯಿತು. ಕೊನೆಗೆ ಕಮಿಟಿ ಸದಸ್ಯರು ಅನ್ವರ್ ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.*