ಡೈಲಿ ವಾರ್ತೆ: 15/ಆಗಸ್ಟ್/2024
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ
ರಾಷ್ಟ್ರಧ್ವಜ ಹಾರುತ್ತಿರುವುದು ನಮ್ಮ ಸೈನಿಕರ ಉಸಿರಿನಿಂದ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸ್ವಾತಂತ್ರ್ಯದ ಕನಸುಗಾರರು ಸ್ವಾತಂತ್ರ್ಯವ ನಮಗೆ ಧಾರೆಯನೆರೆದರು. ಅದನ್ನು ನಾವು ಉಳಿಸೋಣ. ಉಳಿಸಿ ಮುಂದಕ್ಕೆ ಬೆಳೆಸೋಣ ಎಂಬ ಸಂದೇಶವನ್ನು ನೀಡಿದರು. ದೇಶಕ್ಕಾಗಿ ಬದುಕುವ ಮೂಲಕ ನಮ್ಮ ಸೈನಿಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸಬೇಕು. ನಮ್ಮ ದೇಶವನ್ನು ನಮ್ಮ ತಾಯಿ ಎಂದು ಗೌರವಿಸಿ ಎಂಬ ವಿಶೇಷ ಸಂದೇಶದೊಂದಿಗೆ ಅವರು ಈ ದಿನದ ಮಹತ್ವದ ಕುರಿತು ಭಾಷಣ ಮಾಡಿದರು.
ಧ್ವಜಾರೋಹಣದ ಬಳಿಕ ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ” ಕ್ರಿಯೇಟಿವ್ ಸವಿಗಾನ ” ಎಂಬ ಶೀರ್ಷಿಕೆಯಡಿ ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ ಕಾರ್ಯಕ್ರಮ ‘ ಸಪ್ತಸ್ವರ ‘ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಅಭ್ಯಾಗತರೆಲ್ಲರನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಎಲ್ಲರಿಗೂ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ವೃಂದದವರು, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥರಾದ ಶ್ರೀಯುತ ರಾಜೇಶ್ ಶೆಟ್ಟಿರವರು ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಯುತ ಲೋಹಿತ್ ಎಸ್ ಕೆ ರವರು ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.