ಡೈಲಿ ವಾರ್ತೆ: 16/ಆಗಸ್ಟ್/2024

ಗಂಗೊಳ್ಳಿ: ತೌಹೀದ್ ಆಂಗ್ಲ ಮಾಧ್ಯಮ ಕಾಲೇಜ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗಂಗೊಳ್ಳಿ: ತೌಹೀದ್ ಆಂಗ್ಲ ಮಾಧ್ಯಮ, ತೌಹೀದ್ ಪದವಿ ಪೂರ್ವ ಮಹಿಳಾ ಕಾಲೇಜ್, ತೌಹೀದ್ ಪದವಿ ಮಹಿಳಾ ಕಾಲೇಜ್ ಗಂಗೊಳ್ಳಿ ಇವರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆಯಿತು.

ಧ್ವಜಾರೋಹಣ ಗೈದ NNO ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ, SCI ರಾಷ್ಟ್ರೀಯ ಉಪಾಧ್ಯಕ್ಷ ರಾದ ಹುಸೇನ್ ಹೈಕಾಡಿ ಸ್ವಾತಂತ್ರೋತ್ಸವದ ಸಂದೇಶವನ್ನು ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧಾ ಹಾಗೂ ಭಾಷಣ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತೌಹೀದ್ ಸಂಸ್ಥೆಯ ಕಾರ್ಯದರ್ಶಿ ಇಬ್ರಾಹಿಂ ಚೌಗಲೆ, ಸದ್ಯಸ್ಯರಾದ ಫಜ್ಲು ರಹಿಮಾನ್, ಪದವಿ ಕಾಲೇಜ್ ನ ಪ್ರಾಂಶುಪಾಲೆ ಆಶಾ, ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲೆ ಸಮಿನ ಬುಕಾರಿ, ಪ್ರೌಢಶಾಲೆ ಹೆಡ್ ಮಿಸ್ ಸಭಾ ಬಾನು, ಕಛೇರಿ ನಿರ್ವಾಹ ಕರಾದ ತಾಹಿರ್ ಹುಸೇನ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಬಿಂದು ಅತಿಥಿಗಳನ್ನು ಪರಿಚಯ ನೀಡಿದರು,
ಶಾಲಾ ವಿದ್ಯಾರ್ಥಿನಿ ಜೈಷಾ ಕಾರ್ಯಕ್ರಮವನ್ನು ನಿರೂಪಿಸಿ , ಆಫೀಫಾ ವಂದಿಸಿದರು.