ಡೈಲಿ ವಾರ್ತೆ: 16/ಆಗಸ್ಟ್/2024

ಮರೀಲ್ :ಇ.ಎಸ್.ಆರ್ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು : ಮರೀಲ್ ಇ.ಎಸ್.ಆರ್ ಪ್ರೆಸಿಡೆನ್ಸಿ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಉದ್ಯಮಿ ಗಂಗಾಧರ ಆಚಾರ್ಯ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ದೇಶದ ಭವಿಷ್ಯ, ಸಾವಿರಾರು ಹೋರಾಟಗಾರರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಈ ಸ್ವಾತಂತ್ರ್ಯವನ್ನು ಅತ್ಯಂತ ಆರೋಗ್ಯದಾಯಕವಾಗಿ ಮುನ್ನಡೆಸಿಕೊಂಡು ಹೋಗುವಂಥದ್ದು ನಮ್ಮೆಲ್ಲರ ಆದ್ಯ ಕರ್ತವ್ಯ, ಎಲ್ಲರೂ ಪ್ರೀತಿಯಿಂದ ಸಹಬಾಳ್ವೆಯಿಂದ ಬಾಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಜಾಕೀರ್ ಹುಸೈನ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಎಲ್ಲರೂ ನಮಗೆ ಮಾರ್ಗದರ್ಶಕರು ಅವರ ಬಲಿದಾನವನ್ನು ವ್ಯರ್ಥ ಗೊಳಿಸದೆ ಪ್ರೀತಿ ವಿಶ್ವಾಸದಿಂದ ಭಾರತದ ಸ್ವಾತಂತ್ರ್ಯವನ್ನು ಅನುಭವಿಸಬೇಕು ಯಾವುದೇ ರೀತಿಯ ದ್ವೇಷ ಮತ್ಸರಗಳು ನಮ್ಮೊಂದಿಗೆ ಬರದಂತೆ ನೋಡಿಕೊಳ್ಳಬೇಕು ಮುಂದಿನ ಬಲಿಷ್ಠ ಭಾರತದ ಪ್ರಜೆಗಳಾದ ತಾವು ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ಆಡಳಿತ ಮಂಡಳಿಯ ನಿರ್ದೇಶಕ ವಿ.ಕೆ ಶರೀಫ್ ಬಪ್ಪಳಿಗೆ, ಮಾತನಾಡಿ, ನಮ್ಮ ಪೂರ್ವಿಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತವನ್ನು ಸೃಷ್ಟಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮಿಸಬೇಕೆಂದು ನುಡಿದರು. ವಿದ್ಯಾರ್ಥಿ ಪೋಷಕರಾದ ಅಬ್ದುಲ್ ಹಮೀದ್ ಅವರು ವಿದ್ಯಾರ್ಥಿಗಳಿಗೆ ಬಾವುಟದ ಬಣ್ಣಗಳ ಬಗ್ಗೆ ವಿವರಿಸಿ ಜೀವನ ದುದ್ದಕ್ಕೂ ಅದರಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ 

ವಿ.ಕೆ. ಸಲೀಂ, ಮಕ್ಸೂದ್, ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ಮತ್ತು ಶಿಕ್ಷಕೇತರವೃಂದ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

  ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೆರಿಲ್ ಶೆಲ್ಮ ಡಿಸೋಜಾ ಸ್ವಾಗತಿಸಿ, ಫಾತಿಮಾತ್ ಝೀಯಾನ ವಂದಿಸಿದರು. ರಾಹೀಲ ಬಿ. ಕಾರ್ಯಕ್ರಮ ನಿರೂಪಿಸಿದರು.