ಡೈಲಿ ವಾರ್ತೆ: 16/ಆಗಸ್ಟ್/2024

ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ 78ನೇ ಸ್ವಾತಂತ್ರೋತ್ಸವ ದಿನಾಚರಣೆ:ನಮ್ಮ ಭಾರತ ದೇಶ ವಿವಿಧ ಧರ್ಮ ಗಳಿಂದ ಕೂಡಿದ ವೈವಿಧ್ಯಮಯ ದೇಶ, ನಾವೆಲ್ಲ ಐಕ್ಯತೆ ಯಿಂದ ಇರಬೇಕು – ಅಶೋಕ ಕುಮಾರ್ ಶೆಟ್ಟಿ

ಬ್ರಹ್ಮಾವರ: ವಿದ್ಯೇ ಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿ ನಲ್ಲಿ 78 ನೇ ಸ್ವಾತಂತ್ರೋತ್ಸವದ ದಿನಾಚರಣೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ಇದರ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ರವರು ಧ್ವಜಾರೋಹಣ ನಡೆಸಿ ಅವರು ಮಾತನಾಡಿ ನಮ್ಮ ದೇಶ ವಿವಿಧ ಧರ್ಮಗಳಿಂದ ಕೂಡಿದ ವೈವಿದ್ಯಮಯ ದೇಶ, ನಾವೆಲ್ಲ ಐಕ್ಯತೆ ಯಿಂದ ಇರಬೇಕು ” ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮ ದಲ್ಲಿ ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ಇದರ ಉಪಾಧ್ಯಕ್ಷರಾದ ಶ್ರೀ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ಮತ್ತು ಬಿ.ಸೀತಾರಾಮ ಶೆಟ್ಟಿ, ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಬಾರಕೂರು ಇದರ ಆಡಳಿತ ಕ್ಕೆ ಒಳ ಪಟ್ಟ 5 ಸಂಸ್ಥೆ ಗಳ ಕೋ ಆರ್ಡಿ ನೇಟರ್ ರಾದ ಶ್ರೀ ಆರ್ಚಿ ಬಾಲ್ದೊ ಫುಟಾರ್ದೋ, ಹನೆಹಳ್ಳಿ ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀನಿವಾಸ್ ಶೆಟ್ಟಿಗಾರ, ಹೇರಾಡಿ ನೇಷನಲ್ ಐ.ಟಿ. ಐ. ಯ ಸಂಚಾಲಕರಾದ ರಾಮಚಂದ್ರ ಕಾಮತ್ S.V.V.N. ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ರಾಜ್ ರಾಮ್ ಶೆಟ್ಟಿ, ರಕ್ಷಕ ಶಿಕ್ಷಕ ಸಂಘ 2024ರ ಅಧ್ಯಕ್ಷ ರಾದ ಶ್ರೀಜಯ ರಾಮ್ ಆಚಾರ್, ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರು ಇದರ ಸದಸ್ಯ ರಾದ ಶ್ರೀ ರಾಜ ಗೋಪಾಲ ನಂಬಿಯಾರ್, ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.
ಶಾಲೆಯ ನೂತನ ಕಛೇರಿ, ಮುಖ್ಯೋಪಾಧ್ಯಾಯರ ಕೋಣೆ, ಬಾಲವನ , ಮತ್ತು ಶಿಕ್ಷಣ ಕೊಸ್ಕರ 8 ಮತ್ತು 9 ನೇ ತರಗತಿಗೆ A. V.ಪ್ರಾಜೆಕ್ಟ್ ರ್ ನ್ನು ಉದ್ಘಾಟನೆ ಮಾಡಲಾಯಿತು.
ಬಾಲವನ ವನ್ನು ಹೊಸದಾಗಿ ನಿರ್ಮಿಸಿ ಕೊಟ್ಟ ಶೆಟ್ಟಿಗಾರ್ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, 8ನೇ ತರಗತಿಗೆ A. V ಪ್ರಾಜೆಕ್ಟ್ ರ್ ನೀಡಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸುರೇಶ ಶೆಟ್ಟಿ ರವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸುರೇಶ ಶೆಟ್ಟಿ ಮತ್ತು ಶ್ರೀಮತಿ ಜ್ಯೋತಿ ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್ ಕಾರ್ಯಕ್ರಮ ಸಂಯೋಜನೆ ಮಾಡಿದರು,
ಶಾಲಾ ವಿದ್ಯಾರ್ಥಿ ಗಳಿಂದ ಭಾಷಣ ನೃತ್ಯ ಕಾರ್ಯಕ್ರಮ ನೆಡೆಯಿತು.
ಶಾಲಾ ವಿದ್ಯಾರ್ಥಿ ಖುಷಿ ಕಾರ್ಯಕ್ರಮ ನಿರೂಪಿಸಿದರು,ಶಾಲಾ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ ಸ್ವಾಗತಿಸಿದರು,ಶಿಕ್ಷಕಿ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್ ರವರು ವಂದಿಸಿದರು. ಶಿಕ್ಷಕ-ಶಿಕ್ಷಕೇತರರು ಸಹಕರಿಸಿದರು.