ಡೈಲಿ ವಾರ್ತೆ: 16/ಆಗಸ್ಟ್/2024

ನಡೂರು ರತ್ನಾಶೀಲಾ ಎಜುಕೇಷನ್ ಟ್ರಸ್ಟ್(ರಿ) ಗ್ರಾವಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಬ್ರಹ್ಮಾವರ : ನಡೂರು ರತ್ನಾಶೀಲಾ ಎಜುಕೇಷನ್ ಟ್ರಸ್ಟ್(ರಿ) ಗ್ರಾವಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಮೆಸ್ಕಾಂ ನೌಕರರಾದ ಹೆಗ್ಗುಂಜೆ ಸಂತೋಷ್ ಅವರು ನೆರವೇರಿಸಿ ವಿದ್ಯಾರ್ಥಿ ಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯದ ನುಡಿಗಳನ್ನಾಡಿದರು .

ಈ ಸಂದರ್ಭದಲ್ಲಿ ನಡೂರು ರತ್ನಾಶೀಲಾ ಎಜುಕೇಷನ್ ಟ್ರಸ್ಟ್(ರಿ) ನ ಅಧ್ಯಕ್ಷರಾದ ಮನೋಹರ ಹೆಗ್ಡೆ, ಕಾರ್ಯದರ್ಶಿ ಪಾವನಾ ಎಮ್ ಹೆಗ್ಡೆ, ವಿಭಾಗ ಮುಖ್ಯಸ್ಥೆಯರಾದ ಸಂಗೀತಾ ಅಡಿಗ ಹಾಗೂ ಸರಸ್ವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.