ಡೈಲಿ ವಾರ್ತೆ: 16/ಆಗಸ್ಟ್/2024
ಕೋಟ: ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಮತ್ತು ಭಗತ್ ಸಿಂಗ್ ಯುವವೇದಿಕೆ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರಣಿ ಕಾರ್ಯಕ್ರಮ
ಕೋಟ: ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು ಮತ್ತು ಭಗತ್ ಸಿಂಗ್ ಯುವವೇದಿಕೆ (ರಿ.)ಕೋಟ ಇವರು 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರಣಿ ಕಾರ್ಯಕ್ರಮ ನಡೆಯಿತು.
ಮಣೂರು ಗ್ರಾಮದ ಕಂಬಳಗದ್ದೆ ಬೆಟ್ಟು, ರಾಮಪ್ರಸಾದ ,ಕಾಸಾನಗುಂದು,ದೆವಸ ಅಂಗನವಾಡಿಗಳಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು .
ನಂತರ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಯವರ ಸಹಕಾರದೊಂದಿಗೆ ಮಣೂರು ಪರಿಸರದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಕುಮಾರ್ ಶೆಟ್ಟಿ ಚಾಲನೆ ನೀಡಿ .
ಈ ತಂಡದ ಸರಣಿ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿ ಹಲವು ವರ್ಷಗಳಿಂದ ಬಾಳೆಬೆಟ್ಟು ಫ್ರೆಂಡ್ಸ್ ಪರಿಸರ ಕಾಳಜಿಯೊಂದಿಗೆ ಪರಿಸರ ದಿನ ಆಚರಿಸಿ ಗಿಡ ನೆಡುತ್ತಿರುವ ಬಗ್ಗೆ ಶ್ಲಾಘಿಸಿದರು.
ನಂತರ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಅಭಿಯಾನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಸದಾನಂದ .ಜಿ ಚಾಲನೆ ನೀಡಿದರು ಹಾಗೂ ಒಂದು ಲೋಡ್ ಹಸಿ ಹುಲ್ಲು ನೀಲಾವರ ಗೋಶಾಲೆಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೋವಿಗಾಗಿ ಮೇವು ಸಂಸ್ಥಾಪಕರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಬಾಳೆಬೆಟ್ಟು ಫ್ರೆಂಡ್ಸ್ ಅವರ ಈ ಪುಣ್ಯಕಾರ್ಯ ಜಿಲ್ಲೆಯ ಇತರ ಸಂಘಟನೆಗಳಿಗೆ ಗೋ ಸೇವೆ ಮಾಡಲು ಪ್ರೇರಣೆಯಾಗಲಿ ಎಂದರು.
ಹಾಗೂ ಅಪರಾಹ್ನ ಸಂಸ್ಥೆಯ ಸದಸ್ಯರಿಗೆ ಸಂಗ್ರಾಮ ಹೆಸರಿನಲ್ಲಿ ಆಯೋಜಿಸಿದ ಲೀಗ್ ಮಾದರಿಯ ಕ್ರಿಕೇಟ್ ಪಂದ್ಯಾಟಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಾಂಡು ಪೂಜಾರಿ ಚಾಲನೆ ನೀಡಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಅಜಿತ್ ದೇವಾಡಿಗ, ವನಿತಾ ಶ್ರೀಧರ್ ಆಚಾರ್ ,ಸದಸ್ಯರಾದ ಚಂದ್ರ ಪೂಜಾರಿ ,ಪ್ರಶಾಂತ ಹೆಗ್ಡೆ,ಶ್ರೀಮತಿ ಶಾಂತ ,ಗುಲಾಬಿ ಪೂಜಾರಿ, ಲಲಿತ ದೇವಾಡಿಗ,ಹಿಂದೂಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಶಂಕರ ದೇವಾಡಿಗ ಕೋಟ,ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳ ಕುಂದಾಪುರ ತಾಲೂಕು ಸಹ ಸಂಚಾಲಕ ಶ್ರೀನಾಥ್ ತೆಕ್ಕಟ್ಟೆ.
ಜನತಾ ಫಿಶ್ ಮಿಲ್ ವ್ವವಸ್ಥಾಪಕರಾದ ಶ್ರೀನಿವಾಸ ಕುಂದರ್ , ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸತೀಶ್ .ಹೆಚ್ ಕುಂದರ್ , ಮೆಸ್ಕಾಂ ಕೃಷ್ಣ ಪೂಜಾರಿ ಬಾಳೆಬೆಟ್ಟು, ಜುಬೆದಾ ಪಾಲಿಸ್ಯಾಕ್ ಮಾಲಿಕ ಮೊಹಫೀಸ್, ಮದುರಾ ಬಸ್ ಮಾಲಿಕ ಆಸೀರ್ ,ಉದ್ಯಮಿ ಸಂತೋಷ್ ಸುವರ್ಣ,ಪ್ರಗತಿಪರ ಕೃಷಿಕ ಉಮೇಶ್ ಪೂಜಾರಿ ಬಾಳೆಬೆಟ್ಟು,ರಮೇಶ್ ಪೂಜಾರಿ ಮಣೂರು ,ಶೀಲರಾಜ್ ಕಾಂಚನ್ ಕದ್ರಿಕಟ್ಟು,ಗೋಪಾಲ್ ಮಡಿವಾಳ ಕಾಸನಗುಂದು,
ಯುವ ಉದ್ಯಮಿ ಕಿರಣ್ ಪೂಜಾರಿ ತೆಕ್ಕಟ್ಟೆ, ಉದ್ಯಮಿ ಹರೀಶ್ ದೇವಾಡಿಗ, ಉಮೇಶ್ ಪೂಜಾರಿ ,ನಿತ್ಯಾನಂದ ವಡ್ಡರ್ಸೆ, ಅಯೋದ್ಯೆ ಫ್ರೆಂಡ್ಸ್ ಕೋಡಿ ಕನ್ಯಾನ ಅಧ್ಯಕ್ಷ ಸುದಿನ ಕೋಡಿ ಕನ್ಯಾನ ,ಶ್ರೀರಾಮ್ ಫ್ರೆಂಡ್ಸ್ ಕೋಡಿ ಕನ್ಯಾನ ಅಧ್ಯಕ್ಷ ಪುನೀತ್ ಪೂಜಾರಿ ಕೋಡಿ ಕನ್ಯಾನ, ಸಂಘಟನೆಯ ಪ್ರಮುಖರಾದ ಪ್ರಸಾದ್ ಬಿಲ್ಲವ , ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಕಾರ್ಯಕ್ರಮ ಸಂಘಟಿಸಿದರು..ಗ್ರಾಮದ ಪ್ರಮುಖರಾದ ದಿನೇಶ್ ಹೆಗಡೆ, ಜೆ ಎಮ್ ಜೆ ನಾಯಕ್, ಸುಕುಮಾರ್ ಕಮ್ಮಟ್ಟು ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.