ಡೈಲಿ ವಾರ್ತೆ: 16/ಆಗಸ್ಟ್/2024
ಕರ್ನಾಟಕ ಮುಸ್ಲಿಂ ಜಮಾಅತ್,ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ನಿಂದ ಸಮಾಜ ಸೇವಕರಿಗೆ ಅಭಿನಂದನಾ ಕಾರ್ಯಕ್ರಮ
ಮಾದರಿ ಯೋಗ್ಯ ಸ್ವಾತಂತ್ರೋತ್ಸವ ಆಚರಿಸಿದ್ದೀರಿ : ಶ್ರೀ ಬಾಲಕೃಷ್ಣ ಆಳ್ವ ಮಾಣಿ
ಮಾಣಿ : ಬಲಿಷ್ಠ ಸೌಹಾರ್ದಯುತ ಪ್ರಜಾಪ್ರಭುತ್ವ ಸುಂದರ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲಾ ಧರ್ಮದವರ ಕೊಡುಗೆಯನ್ನು ಸ್ಮರಿಸುವುದರೊಂದಿಗೆ,ಒಂದು ಮಾದರೀ ಯೋಗ್ಯ ಸ್ವಾತಂತ್ರೋತ್ಸವ ಆಚರಿಸಿದ್ದೀರಿ ಎಂದು ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಬಾಲಕೃಷ್ಣ ಆಳ್ವರವರು ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಸಂಜರಿ ಹಾಲ್ ನಲ್ಲಿ ನಡೆದ 78 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣಗೈದರು,ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ ಕೆದಿಲ ಇದರ ಸ್ಥಾಪಕರು ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ದುಆ ಮಾಡಿದರು,ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಹಾಫಿಳ್ ಮುರ್ಶಿದ್ ರಾಷ್ಟ್ರಗೀತೆ ಹಾಡಿದರು, ಕೆಎಂಜೆ ಝೋನ್ ಅಧ್ಯಕ್ಷ ಕಾಸಿಂ ಹಾಜಿ ಪರ್ಲೋಟು,ಕೆಎಂಜೆ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಮತ್ತು ಎಸ್‌ವೈಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷ ಮೂಸಾ ಕರೀಂ ಮಾಣಿ,ಶಹಮ್ ಕನ್ಸಟ್ರಕ್ಷನ್ ಮಾಲಕ ಫಾರೂಕ್ ಪೇರಮೊಗರು,ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್,ಸೂರಿಕುಮೇರು ಅಮ್ಮ ಹೋಟೆಲ್ ಮಾಲಕ ಲಕ್ಷ್ಮೀ ನಾರಾಯಣ,ಕೆಎಂಜೆ ಕಾರ್ಯದರ್ಶಿ ಕರೀಂ ಸೂರಿಕುಮೇರು, ಎಲೆಕ್ಟ್ರಿಕಲ್ ಮಾಲಕ ಹಸನ್ ಶಾಫಿ,ಸಿಗ್ಮ ಎಂಟರ್ಪ್ರೈಸ್ ಮಾಲಕ ಹುದೈಫ್ , ಮೆಲ್ಕಾರ್ ಶೂ ಪ್ಯಾಲೇಸ್ ಮಾಲಕ ಉಮ್ಮರ್ ಫಾರೂಕ್,ರಿಯಾಝ್ ನೆಲ್ಲಿ, ಹಂಝ ಸೂರಿಕುಮೇರು, ಹಸೈನ್ ಟೈಲರ್,ಅಶ್ರಫ್ ಸಖಾಫಿ, ಮುಂತಾದವರು ಉಪಸ್ಥಿತರಿದ್ದರು, ಇದೇ ವೇಳೆ ಪ್ರಕೃತಿ ವಿಕೋಪ ಗಾಳಿ ಮಳೆ ಬಿಸಿಲು ಲೆಕ್ಕಿಸದೆ ಸೇವಾ ಮನೋಭಾವದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವರ್ ಮ್ಯಾನ್ ಗಳಾದ ಶ್ರೀ ಸುನಿಲ್ ಕುಮಾರ್ ಕೊರಳಿಕೊಪ್ಪ ಸಾಗರ,ಮತ್ತು ಲವ ಎನ್ ,ತಾಳೀಕಟ್ಟಿ ಚಿತ್ರದುರ್ಗ, ಹಾಗೂ ಸಮಾಜಸೇವೆಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಬಡ ಜನರ ಪಾಲಿಗೆ ಆಶಾಕಿರಣವಾಗಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವ ಸಮಾಜ ಸೇವಕರಾದ ಹನೀಫ್ ಸಂಕ ಸೂರಿಕುಮೇರು, ಅಝೀಝ್ ಮಾಣಿ,ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಚಾಲಕರಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ನೌಫಲ್ ಸೂರಿಕುಮೇರು,ಮಜೀದ್ ಸೂರಿಕುಮೇರು,ಆಸಿಫ್ ಮಾಣಿ ಇವರುಗಳಿಗೆ ಸಮಾಜ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಸಲೀಂ ಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.