



ಡೈಲಿ ವಾರ್ತೆ: 17/ಆಗಸ್ಟ್/2024


ಮಣಿಪಾಲ: ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎ ಸಿ ಹಾಕಿ ಮಲಗಿದ್ದ ಮಗ ಉಸಿರುಗಟ್ಟಿ ಸಾವು!
ಉಡುಪಿ: ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಶುಕ್ರವಾರ ಮಣಿಪಾಲದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ನಿವಾಸಿ ಗುರುರಾಜ್ (32) ಎಂದು ಗುರುತಿಸಲಾಗಿದೆ.
ಗುರುರಾಜ್ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು.
ಬೆಳಗಾಗುವಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿಯಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.