ಡೈಲಿ ವಾರ್ತೆ: 20/ಆಗಸ್ಟ್/2024

ನದಿಯಲ್ಲಿ ಈಜಲು ಇಳಿದ ವ್ಯಕ್ತಿಯ ಶರ್ಟ್‍ನೊಳಗೆ ನುಸುಳಿದ ಬೃಹತ್‌ ಹಾವು.!
(ವಿಡಿಯೋ ವೀಕ್ಷಿಸಿ)

ಭಾರೀ ಮಳೆಯಿಂದಾಗಿ ಅಣೆಕಟ್ಟುಗಳು ಮತ್ತು ಕೊಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಅನೇಕ ಜನರು ಅಣೆಕಟ್ಟುಗಳು ಮತ್ತು ಕೊಳಗಳಿಗೆ ಹೋಗಿ ಈಜುವುದು, ಸ್ನಾನ ಮಾಡುವುದು ಸಹಜ. ಇತ್ತೀಚೆಗೆ ಒಬ್ಬ ವ್ಯಕ್ತಿ ಈಜಲು ನದಿಯೊಂದಕ್ಕೆ ಇಳಿದು ಅಲ್ಲಿ ಆತ ಖುಷಿಯಿಂದ ಈಜಲು ಶುರುಮಾಡಿದ್ದಾನೆ. ಈ ಮಧ್ಯೆ, ತನ್ನ ಬಟ್ಟೆಗಳಿಂದ ಏನೋ ಜಾರಿದಂತೆ ಅವನಿಗೆ ಅನಿಸಿತು. ಅವನು ನೀರಿನಿಂದ ಮೇಲೆ ಬಂದು ತನ್ನ ಬಟ್ಟೆಯನ್ನು ಮೇಲಕ್ಕೆತ್ತಿದಾಗ ಅದರೊಳಗೆ ದೊಡ್ಡ ಹಾವು ಸೇರಿಕೊಂಡಿರುವುದು ಕಂಡುಬಂದಿದೆ. ಆಗ ಆತನ ಸ್ಥಿತಿ ಊಹಿಸಲು ಅಸಾಧ್ಯ. ಹೆದರಿದ ಆತ ಅದು ಎಲ್ಲಿ ತನಗೆ ಕಚ್ಚುತ್ತದೆ ಎಂದು ಭಯ ಭೀತನಾಗಿ ಕೊನೆಗೆ ಹಾವನ್ನು ಹಿಡಿದು ಹೊರಗೆ ಎಸೆದು ಬಹಳ ದೂರ ಓಡಿದ್ದಾನೆ. ಆದರೆ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಗುತ್ತಿದ್ದಾರೆ. ಇದು ಟ್ವಿಸ್ಟ್ ಎಂದು ತಮಾಷೆಯ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳಿಗೆ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.