ಡೈಲಿ ವಾರ್ತೆ: 21/ಆಗಸ್ಟ್/2024

ಇಂದು ಭಾರತ್ ಬಂದ್; ಏನು ತೆರೆದಿರುತ್ತದೆ? ಯಾವ ಸೇವೆ ಲಭ್ಯವಿರುವುದಿಲ್ಲ?

ನವದೆಹಲಿ: ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯು ಇಂದು (ಆಗಸ್ಟ್ 21) ಭಾರತ್ ಬಂದ್‌ಗೆ ಕರೆ ನೀಡಿದೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಮೀಸಲಾತಿಗಳ ಕುರಿತ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ವಿರೋಧಿಸಿ ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯಿಂದ ಬಂದ್‌ಗೆ ಕರೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು SC/ST ಗುಂಪುಗಳೊಳಗೆ ಉಪ-ವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿತು. ಹೆಚ್ಚು ಅಗತ್ಯವಿರುವವರಿಗೆ ಆದ್ಯತೆ ನೀಡುತ್ತದೆ. ಈ ನಿರ್ಧಾರವು ರಾಜಸ್ಥಾನದ ಎಸ್‌ಸಿ/ಎಸ್‌ಟಿ ಗುಂಪುಗಳಲ್ಲಿ ವ್ಯಾಪಕ ಅಸಮಾಧಾನವನ್ನು ಹುಟ್ಟುಹಾಕಿತು.

ಭಾರತ ಬಂದ್​ಗೆ ಕಾರಣವೇನು?:ಎಸ್‌ಸಿ ಮತ್ತು ಎಸ್‌ಟಿ ಗುಂಪಿನೊಳಗೆ ಉಪವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪು ಹಲವಾರು ಗುಂಪುಗಳ ನಡುವೆ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಅಗತ್ಯವಿರುವವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಉನ್ನತ ನ್ಯಾಯಾಲಯದ ತೀರ್ಪು ಒತ್ತಿಹೇಳಿದೆ. ಈ ನಿರ್ಧಾರವು ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳಿಂದ ವಿರೋಧವನ್ನು ಎದುರಿಸಿತು. ಇದು ಮೀಸಲಾತಿಯ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸುತ್ತದೆ. ಈ ತೀರ್ಪನ್ನು ಪ್ರಶ್ನಿಸಿ ಮತ್ತು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಭಾರತ್ ಬಂದ್‌ಗೆ ಕರೆ ನೀಡಿದ್ದರೂ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲೆಗಳು, ಕಾಲೇಜುಗಳು, ಪೆಟ್ರೋಲ್ ಪಂಪ್‌ಗಳು ಕಾರ್ಯನಿರ್ವಹಿಸಲಿವೆ ಎಂದು ವರದಿಗಳು ಸೂಚಿಸುತ್ತವೆ. ಇದಲ್ಲದೆ, ತುರ್ತು ಸೇವೆಗಳಾದ ವೈದ್ಯಕೀಯ, ಕುಡಿಯುವ ನೀರು, ಸಾರ್ವಜನಿಕ ಸಾರಿಗೆ, ರೈಲು ಸೇವೆಗಳು ಮತ್ತು ವಿದ್ಯುತ್ ಸೇವೆಗಳು ತೆರೆದಿರುತ್ತವೆ.

ಯಾವ ಸೇವೆಗಳು ತೆರೆದಿರುತ್ತದೆ?:
ತುರ್ತು ಸೇವೆಗಳು: ಆ್ಯಂಬುಲೆನ್ಸ್ ಸೇವೆಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಔಷಧಾಲಯಗಳು: ಅಗತ್ಯ ವೈದ್ಯಕೀಯ ಸೇವೆಗಳು ಮತ್ತು ಔಷಧಿ ಅಂಗಡಿಗಳು ತೆರೆದಿರುತ್ತವೆ. ಬ್ಯಾಂಕ್‌ಗಳು, ಶಾಲೆಗಳು ಮತ್ತು ಕಾಲೇಜುಗಳು: ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಶಾಲೆಗಳು ಬಂದ್‌ನ ಹೊರತಾಗಿಯೂ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ.