ಡೈಲಿ ವಾರ್ತೆ: 21/ಆಗಸ್ಟ್/2024

ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಬೈಕ್ ಪಲ್ಟಿ. ಸವಾರ ಪಾರು! (ವಿಡಿಯೋ ವೈರಲ್)

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಾಗರವಳ್ಳಿ‌ ಗ್ರಾಮದಲ್ಲಿ ಎದೆ ಝಲ್ ಅನಿಸುವ ಡೆಡ್ಲಿ ಆಕ್ಸಿಡೆಂಟ್ ನಡೆದಿದ್ದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರೇಸ್​ಗೆ ಇಳಿದವರಂತೆ ಎರಡು ದ್ವಿಚಕ್ರ ವಾಹನಗಳೂ ವೇಗವಾಗಿ ಬಂದಿದ್ದು ಅದರಲ್ಲಿ ಒಂದು ಬೈಕ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ರೋಡ್ ಎಡ್ಜ್ ಗೆ ಬಂದು ಓವರ್ ಟೇಕ್ ಮಾಡಲು ಯತ್ನಿಸುವಾಗ ಆಯಾತಪ್ಪಿ 4 ಬಾರಿ ಬೈಕ್ ಪಲ್ಟಿ ಹೊಡೆದಿದೆ.

ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ಕು ಬಾರಿ ಬೈಕ್ ‌ಪಲ್ಟಿಯಾಗಿ, ಚಾಲಕ ಹಾರಿ ಬಿದ್ದಿದ್ದಾನೆ. ಪವಾಡ ಸದೃಶದ ರೀತಿ ಚಾಲಕ ಎದ್ದು ನಿಂತಿದ್ದು ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಲ್ದೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿರುವ ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.