ಡೈಲಿ ವಾರ್ತೆ: 21/ಆಗಸ್ಟ್/2024
ಮರ್ಹೂಂ ಶೈಖುನಾ ಕಕ್ಕಿಂಜೆ ಎಂ.ಎಸ್. ಮೂಸಾ ಉಸ್ತಾದ್ (ನ.ಮ), ಶಿಷ್ಯ ಸಂಘಟನೆ ಅಸ್ತಿತ್ವಕೆ
ಪ್ರಸಿದ್ಧ ವಿದ್ವಾಂಸರೂ, ಸೂಫೀ ವರ್ಯರೂ, ಪ್ರಖ್ಯಾತ ವಾಗ್ಮಿಯೂ, ಒಂದು ಕಾಲದ ಮತಪ್ರವಚನ ವೇದಿಕೆಗಳ ತುಂಬು ಸಾನಿಧ್ಯವಾಗಿದ್ದ, ನಾಲ್ಕು ದಶಕಗಳ ಸಾರ್ಥಕ ದೀನೀ ಸೇವೆಯಿಂದ ಹಲವಾರು ವಿದ್ವಾಂಸರನ್ನು ಸಮುದಾಯಕ್ಕೆ ಸಮರ್ಪಿಸಿದ ರಾಜ್ಯದ ಹಿರಿಯ ಉಲಮಾ’ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟ ಮರ್ಹೂಂ ಶೈಖುನಾ ಉಸ್ತಾದ್ ಕಕ್ಕಿಂಜೆ ಎಂ.ಎಸ್.ಮೂಸಾ ಮುಸ್ಲಿಯಾರ್ (ನ.ಮ) ಇವರ ಶಿಷ್ಯಂದಿರ ಸಂಘಟನೆ ಮೌರಿದುಲ್ ಹಸನಾತ್ ಅಸೋಸಿಯೇಶನ್ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಉಸ್ತಾದ್ ಮುದರ್ರಿಸ್ ಆಗಿ ಸೇವೆಗೈದ ಅರಬಿ ಶಹೀದ್ ವಲಿಯುಲ್ಲಾರವರ ಪಾವನ ಪಾದಸ್ಪರ್ಶದಿಂದ ಪುನೀತಗೊಂಡ ಮೊಗ್ರಾಲ್ ಕಡಪ್ಪುರಂ ಕೊಪ್ಪಳಂ ವಲಿಯ ಜುಮ್ಮಾ ಮಸ್ಜಿದ್ ನಲ್ಲಿ ಸೇರಿದ ಶಿಷ್ಯಂದಿರ ಸಭೆಯಲ್ಲಿ 'ಶಿಷ್ಯ ಸಂಘಟನೆ'ಗೆ ರೂಪು ಕೊಟ್ಟು,ಉಸ್ತಾದ್ ನಾಲ್ಕು ದಶಕಗಳಲ್ಲಿ ಮಾಡಿದ ದೀನೀ ಸೇವೆಯನ್ನು ಸ್ಮರಿಸಲಾಯಿತು.
'ಮೌರಿದುಲ್ ಹಸನಾತ್ ಅಸೋಸಿಯೇಶನ್' ಇದರ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರಮುಖ ವಿದ್ವಾಂಸ,ಬಹು: ಅಲ್ ಹಾಜ್ ಅಬೂಸ್ವಾಲಿಹ್ ಮದನಿ ಉಸ್ತಾದ್. (ಮುದರ್ರಿಸ್: ಆಲಡ್ಕ)
ಅಧ್ಯಕ್ಷರು:ಸೈಯ್ಯದ್ ತ್ವಾಹ ತಂಙಳ್ ಅಲ್ ಮಶ್ಹೂರ್, ಮೊಗ್ರಾಲ್.
ಉಪಾಧ್ಯಕ್ಷರುಗಳು: ಬಹು: ಉಸ್ತಾದ್ ಎ.ಬಿ. ಹಸನುಲ್ ಫೈಝಿ, ಅಜ್ಜಾವರ. ಬಹು: ಪಿ.ಎಸ್.ಅಬ್ದುರ್ರಹ್ಮಾನ್ ಬಾಖವಿ ಉಸ್ತಾದ್ ಕಕ್ಕಿಂಜೆ.ಬಹು: ಅಬ್ದುಲ್ ಲತೀಫ್ ಅಲ್ ಅಸ್ನವಿ,ಚೆರ್ಕಳ.
ಪ್ರಧಾನ ಕಾರ್ಯದರ್ಶಿ: ಬಹು: ಕಾಸಿಂ ಫೈಝಿ,ಸೀತಾಂಗೋಳಿ.
ಕಾರ್ಯದರ್ಶಿಗಳು: ಬಹು: ಸಿರಾಜುದ್ದೀನ್ ಫೈಝಿ (ಚೇರಾಲ್ ಉಸ್ತಾದ್).ಬಹು: ಅಬ್ದುಲ್ ಸಲಾಂ ಸಅದಿ,ನೀರ್ಚಾಲ್.
ಖಜಾಂಜಿ: ಬಹು: ಅಬ್ದುಲ್ ಹಮೀದ್ ಫೈಝಿ ಉಸ್ತಾದ್ ಕಿಲ್ಲೂರು.
ಕೋ ಆರ್ಡಿನೇಟರ್:ಬಹು: ಇಬ್ರಾಹೀಂ ಫೈಝಿ,ಸೀತಾಂಗೋಳಿ.
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ: ಸಮದ್ ಸಖಾಫಿ ಜೋಗಿಬೆಟ್ಟು, ಖಾಲಿದ್ ಮದನಿ ಕಕ್ಕಿಂಜೆ, ಶರೀಫ್ ಫೈಝಿ ಪೆರ್ಡಾಡಿ,ಅಬ್ದುಲ್ ರಹ್ಮಾನ್ ಲತೀಫಿ ಚಾರ್ಮಾಡಿ,ಕಬೀರ್ ಮದನಿ ಮೂಡುಶೆಡ್ಡೆ,ಅಬೂಬಕ್ಕರ್ ಮುಸ್ಲಿಯಾರ್ ಸಾಲೆತ್ತೂರು,ಇವರನ್ನು ಆಯ್ಕೆ ಮಾಡಲಾಯಿತು,ಉಳಿದ ಉಸ್ತಾದರ ಎಲ್ಲ ಶಿಷ್ಯಂದಿರುಗಳು ಸಮಿತಿಯ ಸದಸ್ಯರುಗಳಾಗಿರುತ್ತಾರೆ.