ಡೈಲಿ ವಾರ್ತೆ: 01/Sep/2024
✍🏻 ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ. (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)[email protected]
ಬಿದ್ಕಲ್ ಕಟ್ಟೆ: 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ – ನೂರಾರು ಸಾಹಿತ್ಯಭಿಮಾನಿಗಳು ಕಾರ್ಯಕ್ರಮದಲ್ಲಿ ಸಾಕ್ಷಿ
- ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ಹುಟ್ಟು, ಕನ್ನಡ ಶಾಲೆಗಳು ಕನ್ನಡ ಭಾಷೆಯ ಬೌದ್ಧಿಕ ನೆಲಗಟ್ಟಿಗೆ ಚೌಕಟ್ಟಾಗಿ ನಿಲ್ಲುತ್ತದೆ, ಕನ್ನಡ ಭಾಷೆ ಬೆಳೆಸುವಲ್ಲಿ ಮುಕ್ತ ಮನಸ್ಸಿನ ಕೂಗು ಮೊಳಗಬೇಕಿದೆ. ಪರಕೀಯರ ಭಾಷೆಗಳಿಂದ ಕನ್ನಡದ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿರುವುದು ಇಂದಿನ ಸಮಾಜಕ್ಕೆ ದುಸ್ತರ: ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಹಿತನುಡಿ”
ಸುದ್ದಿ: ಕುಂದಾಪುರ
ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಬಿದ್ಕಲ್ ಕಟ್ಟೆಯಲ್ಲಿ ಸಾಹಿತ್ಯ ಸಂಭ್ರಮದ ಸಡಗರ! ನೂರಾರು ಕನ್ನಡ ಮನಸುಗಳ ಸಂಭ್ರಮದಿಂದ ಅದ್ದೂರಿಯಾಗಿ ಚಾಲನೆ ಸಿಕ್ಕಿತು.
19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸೊಬಗು, ಕನ್ನಡದ ಮೆರಗು ಮುಗಿಲು ಮುಟ್ಟಿತ್ತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಆವರಣದಲ್ಲಿರುವ “ಮೊಳಹಳ್ಳಿ ಶಿವರಾವ್ ವೇದಿಕೆ”ಯಲ್ಲಿ ನಡೆದ ಕುಂದಾಪುರ ತಾಲೂಕು 19ನೇಯ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಚಂಡೆ ಬಾರಿಸುವುದರ ಮೂಲಕ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಮೋಹನ್ ಆಳ್ವಾ ಅವರು ಸಮ್ಮೇಳನದಲ್ಲಿ ಕನ್ನಡದ ಬಗೆಗಿನ ಸಾಹಿತ್ಯ ಸಿಂಚನವನ್ನು
ಉಣಬಡಿಸಿದ ಶ್ರೀಯುತ ಮೋಹನ್ ಆಳ್ವ ಅವರು ಮಾತನಾಡಿ ಕನ್ನಡ ಶಾಲೆಗಳು ಮುಚ್ಚಿದರೆ, ನಮ್ಮ ಸಂಸ್ಕೃತಿಯ ಬದುಕಿನ ಅವಿಭಾಜ್ಯ ಅಂಗಗಳನ್ನು ಕಳೆದುಕೊಂಡಂತೆ ,ದೇಶದಲ್ಲಿ ಪರಾಕೀಯರ ವ್ಯಾಮೋಹದಿಂದ ಕನ್ನಡ ಶಾಲೆಗಳು ಇಂದು ದಯಾನೀಯ ಪರಿಸ್ಥಿತಿಯಲ್ಲಿ ಮುಚ್ಚುತ್ತಿವೆ. ನಮ್ಮ ಸಂಸ್ಕೃತಿಯ ಜೊತೆಗೆ ಭಾಷೆ, ನೆಲದ ಉಸಿರನ್ನು ಉಳಿಸುವಲ್ಲಿ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಸರ್ಕಾರವು ಕನ್ನಡ ಮತ್ತು ಕನ್ನಡದ ಶಾಲೆಗಳನ್ನು ಉಳಿಸುವಲ್ಲಿ ಇನ್ನಷ್ಟು ಪ್ರಯತ್ನ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ. ಕನ್ನಡ ಈ ದೇಶದ ಉಸಿರು, ಸರ್ಕಾರಗಳು ಆಯ್ಕೆಯಾಗಿ ಬಂದ ನಂತರ ಸರ್ಕಾರಿ ಶಾಲೆಯ ಪರಿಸ್ಥಿತಿಯನ್ನ ಮನ ಗಾಣಬೇಕು, ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಿದರೆ, ನಮ್ಮ ನಾಡು ಉಳಿದಂತೆ, ಪ್ರತಿ ಮನೆ ಮತ್ತು ಮನಗಳಲ್ಲಿ ಕನ್ನಡ ಮೊಳಗಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಮನ್ವಯತೆ ಜೋಡಣೆ ಸಾಧ್ಯ, ಕನ್ನಡ ನಾಡು ನುಡಿ ಸಂಸ್ಕೃತಿಯ ಅನಾವರಣ ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಮಾತ್ರ ಸಾಧ್ಯ. ನಾವೆಲ್ಲರೂ ಕನ್ನಡವನ್ನ ಉಳಿಸಿ ಬೆಳೆಸುವಲ್ಲಿ ಕಟ್ಟಿಬದ್ಧರಾಗಬೇಕು ಎಂದು ಹೇಳಿದರು.
ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಸಮ್ಮೇಳನದ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊಫೆಸರ್ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮೊಳಹಳ್ಳಿ ಮಹೇಶ್ ಹೆಗ್ಡೆ, ಸಮ್ಮೇಳನ ಆರ್ಥಿಕ ಸಮಿತಿಯ ಅಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ, ಕಸಾಪ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಮೊಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಹಾರ್ದಳ್ಳಿ – ಮಂಡಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಶೆಟ್ಟಿ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಜಯಂತಿ ಸೇರಿ ಮತ್ತಿತರು ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿ, ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ದಿನಕರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಮೂಡುಬಿದ್ರೆ ವಿದ್ಯಾರ್ಥಿಗಳು ಅಭಿನಯಿಸುವ,ಸಾಹಿತಿ ವೈದೇಹಿ ಅವರು ರಚಿಸಿದ, ರಂಗ ನಿರ್ದೇಶಕ ಡಾ. ಜೀವನ್ ರಾo ನಿರ್ದೇಶನದ “ನಾಯಿಮರಿ” ನಾಟಕ ಪ್ರದರ್ಶನ ಅದ್ದೂರಿಯಾಗಿ ನಡೆಯಿತು. ಸಂಭ್ರಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಾರ ಸಂಖ್ಯೆಯ ಸಾಹಿತ್ಯ ಅಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘಟನೆಯ ಮಿತ್ರರು, ಶಾಲಾ ಶಿಕ್ಷಕರಂಗ ದದವರು ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರಿಗೂ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಎರಡು ದಿನಗಳ ಕಾಲ ವಿಶೇಷವಾಗಿ ಜರುಗಿ ಸಂಪನ್ನಗೊಳ್ಳಲಾಗಿದೆ.