ಡೈಲಿ ವಾರ್ತೆ: 11/Sep/2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ
ತಾಯಿಯೇ ಮೊದಲ ಗುರು – ಪ್ರೋ. ಎಂ. ಬಾಲಕೃಷ್ಣ ಶೆಟ್ಟಿ

ಕುಂದಾಪುರ: “ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು”. ಮೊದಲು ತಾಯಿಯನ್ನು ಸನ್ಮಾನಿಸಿದರೆ ಇಡೀ ಶಿಕ್ಷಕ ಸಮುದಾಯವನ್ನೇ ಗೌರವಿಸಿದಂತೆ ಆದ್ದರಿಂದ ಶಿಕ್ಷಕರನ್ನು ಸನ್ಮಾನಿಸುವುದಾದರೆ ವರ್ಷಕ್ಕೊಂದು ತಾಯಿಯನ್ನು ಸನ್ಮಾನಿಸಿ ಎಂದು ಕಟೀಲಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೋ. ಎಂ ಬಾಲಕೃಷ್ಣ ಶೆಟ್ಟಿ ಹೇಳಿದರು.


ಅವರು ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ವತಿಯಿಂದ ಸೆ. 10 ರಂದು ಮಂಗಳವಾರ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಮಾತನಾಡಿದರು. ತಾಯಿಯೇ ಮೊದಲ ಶಿಕ್ಷಕಿ. ನಾವು ಮೊದಲು ತಾಯಿಯನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಶಿಕ್ಷಕವೃತ್ತಿ ಎನ್ನುವುದು ಬಹಳ ಶ್ರೇಷ್ಠವಾದದ್ದು ಶಿಕ್ಷಕರಿಗೆ ಜಗತ್ತಿನಲ್ಲೇ ವಿಶಿಷ್ಟವಾದ ಗೌರವವಿದೆ. ಈ ದೇಶ ಸದೃಢವಾಗಬೇಕಾದರೆ ವಿದ್ಯಾರ್ಥಿಗಳನ್ನು ತಿದ್ದುವ ಶಿಕ್ಷಕರು ಪ್ರಾಮಾಣಿಕವಾಗಿರಬೇಕು.
ಶಿಲ್ಪಿ ಗೆ ಶಿಲೆ ಮಾಡಲು ಆಗುವುದಿಲ್ಲ ಶಿಲೆಯಲ್ಲಿ ಶಿಲ್ಪ ಮಾಡಬಹುದು. ಹಾಗೆ ಶಿಕ್ಷಕರು ಶಿಲೆಯನ್ನು ಮಾಡುವ ಕೆಲಸಕ್ಕೆ ಕೈ ಹಾಕದೆ ಶಿಲೆಯಲ್ಲಿ ಶಿಲ್ಪ ಮಾಡಿದರೆ ಉತ್ತಮ ಶಿಕ್ಷಕರಾಗುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಯುನಿಟ್ ಆಫ್ ಎಮ್.ಎಮ್ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು. ಅವರು ಮಾತನಾಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಂಧ ಉತ್ತಮವಾದಾಗ ಯಶಸ್ಸು ಸಾಧ್ಯ. ಪ್ರೀತಿ ವಿಶ್ವಾಸಗಳೊಂದಿಗೆ ಮಾಡುವ ಪಾಠಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.

ಈ ಸಂದರ್ಭ 2024-25ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಬೈಂದೂರು ವಲಯದ ಉಪ್ಪುಂದ ಸರ್ಕಾರಿ ಪ.ಪೂ ಕಾಲೇಜು (ಪ್ರೌಢ ವಿಭಾಗ)ದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಶೆಟ್ಟಿ, ಹೆರೆಂಜಾಲು ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟಗಾರ, ಕುಂದಾಪುರ ವಲಯದ ಕೆ.ಪಿ.ಎಸ್ ಬಿದ್ಕಲ್ ಕಟ್ಟೆ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ , ಕುಂದಾಪುರ ವಲಯಲದ ಹಂಗಳೂರು ಸ.ಹಿ.ಪ್ರಾ.ಶಾಲೆಯ ಸೀತಾರಾಮ್ ಶೆಟ್ಟಿ, ಗೋಪಾಡಿ ಪಡು ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಶ್ರೀನಿವಾಸ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಅನೀಶ್ ಆರ್ ಶೆಟ್ಟಿಯನ್ನು ಸನ್ಮಾನಿಸಲಾಯಿತು.


ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಅರ್ಥಶಾಸ್ತ್ರ ವಿಭಾಗದ ಶಿಕ್ಷಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು.
ಸುಣ್ಣಾರಿ ಎಕ್ಸಲೆಂಟ್ ಹೈಸ್ಕೂಲ್‌ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ. ಆಚಾರ್ಯ ವಂದಿಸಿದರು.

ಪ್ರಸಿದ್ಧ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಹಾಗೂ ಕಿರ್ಲೋಸ್ಕರ್ ಸತ್ಯನಾರಾಯಣ ಹಾಗೂ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.