ಡೈಲಿ ವಾರ್ತೆ: 11/Sep/2024

ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಗಣಪ ಭಾವೈಕ್ಯತೆ ಸಂದೇಶ ಸಾರಿ ಎಲ್ಲರಿಗೂ ಮಾದರಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಧರ್ಮದ ಮುಸ್ತಾಪ್ ಮಾಬುಸಾಬ್ ಕೋಲ್ಕಾರ ಎಂಬುವವರು ತನ್ನ ಮೂರು ವರ್ಷದ ಮಗನ ಆಸೆ, ಪ್ರೀತಿ, ಹಠಕ್ಕೆ ಕಟ್ಟುಬಿದ್ದು ತನ್ನ ಮನೆಯಲ್ಲಿ ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ.

ಮುಸ್ತಾಪ್ ಮತ್ತು ಯಾಸ್ಮಿನಾಬಾನು ದಂಪತಿಗೆ ಐವರು ಮಕ್ಕಳು. ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ.
ಮಗನ ಆಸೆಗೆ ಬೆಲೆಕೊಟ್ಟು ಮನೆಯಲ್ಲಿ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ಸಂತಸ ವ್ಯಕ್ತಪಡಿಸಿದ ತಂದೆ:
ಅಂಗನವಾಡಿಯಲ್ಲೂ ರಾಷ್ಟ್ರೀಯ ಹಬ್ಬದ ದಿನ ಹಿಂದೂ ದೇವರ ವೇಷಭೂಷಣ ತೊಡಿಸಿದ್ದೇವೆ. ಮಕ್ಕಳು ದೇವರ ಸಮಾನ ಅಂತಾರೆ, ದೇವರೇ ಮನೆಗೆ ಬಂದಂತಾಗಿದ್ದು ಶೃದ್ಧೆ, ಭಕ್ತಿ, ಸಂಭ್ರಮದಿಂದ ಗಣೇಶನ ಮೂರ್ತಿಯನ್ನು ಪೂಜಿಸುತ್ತೇವೆ. ಪ್ರತಿವರ್ಷವೂ ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು
ಮುಸ್ತಪಾ- ಯಾಸ್ಮಿನಾಬಾನು ಸಂತಸ ವ್ಯಕ್ತಪಡಿಸಿದ್ದಾರೆ.