ಡೈಲಿ ವಾರ್ತೆ: 17/Sep/2024

ಕಲೋತ್ಸವವು ಮಾನವೀಯ ಸಂಬಂಧಗಳಿಗೆ ನೆಲೆ ನೀಡುತ್ತದೆ-ಬಿ ಇ ಓ ನಾಣಕೀ ನಾಯಕ

ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶ
ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೆರ್ಯ ಇಮ್ಮಡಿಗೊಂಡು
ಸಾಧನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯಕ ಅವರು ಹೇಳಿದರು.
ಲಕ್ಷ್ಮೇಶ್ವರದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಲಕ್ಷ್ಮೇಶ್ವರ ದಕ್ಷಿಣ ಮತ್ತು ಉರ್ದು ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ
ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡುವುತ್ತಿದ್ದು,
ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಚ್ ಎಸ್ ರಾಮನಗೌಡರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಹಾಗೂ ಉತ್ತೇಜನ ನೀಡುವುದು ಕಲೋತ್ಸವ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯವಾಗಿದೆ. ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ, ನೈತಿಕವಾಗಿ ವಿಕಾಸ ಹೊಂದಲು ಸಹಾಯ ಮಾಡುವ ಮಹತ್ತರ ಕಾರ್ಯ ಎಂದು ಅವರು ತಿಳಿಸಿದರು.
ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ ಎಸ್ ಭಜಂತ್ರಿ ಹೇಳಿದರು.

ಜೊತೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಎರಡು ಕ್ಲಸ್ಟರಿನ 09 ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಿ ಆರ್ ಪಿ ಈಶ್ವರ ಮೆಡ್ಲೇರಿ ಮತ್ತು ಬಿ ಎಮ್ ಯರಗುಪ್ಪಿ ಬಹುಮಾನ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಬಿಇಒ ಎಚ್ ನಾಣಕೀ ನಾಯಕ, ಬಿ ಆರ್ ಸಿ ಯ ಬಿ ಎಸ್ ಭಜಂತ್ರಿ, ಎಚ್ ಎಸ್ ರಾಮನಗೌಡರ, ಅಧ್ಯಕ್ಷತೆ ಚಿದಾನಂದ ಬೇವಿನಮರದ, ಸಂಘದ ಡಿ ಎಚ್ ಪಾಟೀಲ, ಎಸ್ ಡಿ ಲಮಾಣಿ, ಮುಖ್ಯೋಪಾಧ್ಯಾಯಿನಿ ಪ್ರಗತಿ ತಾವರೆ ಹಾಗೂ ಎಸ್ ಕೆ ಹವಾಲ್ದಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಲಕ್ಷ್ಮೇಶ್ವರ ದಕ್ಷಿಣ ಸಿ ಆರ್ ಪಿ ಸತೀಶ ಬೋಮಲೆ ಮಾತನಾಡಿದರು.
ಬಿ ಆರ್ ಪಿ ಯವರಾದ ಈಶ್ವರ ಮೆಡ್ಲೇರಿ, ಬಸವರಾಜ ಎಮ್ ಯರಗುಪ್ಪಿ, ವಾಸು ದೀಪಾಳಿ, ಸಿ ಆರ್ ಪಿ ಗಳಾದ ಉಮೇಶ ನೇಕಾರ, ಎನ್ ಎ ಮುಲ್ಲಾ, ಜ್ಯೋತಿ ಗಾಯಕವಾಡ, ಶಿಕ್ಷಕರಾದ ಜಿ ಬಿ ಸುಗಜಾನರ, ಎಸ್ ಎಚ್ ಪೂಜಾರ, ನವೀನ ಅಂಗಡಿ, ಎಚ್ ಡಿ ನಿಂಗರೆಡ್ಡಿ, ಜೆ ವಿ ಶೆಟ್ಟರ್, ಜಿ ಎನ್ ಮೆಳ್ಳಳ್ಳಿ, ಎಮ್ ಎಸ್ ಹುಣಸಿಮರದ, ಎಸ್ ಸಿ ಹೂವಿನ, ಉಮೇಶ ಹೊಸಮನಿ, ಸಂತೋಷ ಮಲ್ಲಿಗವಾಡ ಹಾಗೂ ಸಂಬಂಧಿಸಿದ ಶಾಲಾ ಮಕ್ಕಳು ಮತ್ತು ನಿರ್ಣಾಯಕರು ಹಾಜರಿದ್ದರು.
ಕಾವ್ಯ ಬಚಲಾಪೂರ ಸ್ವಾಗತಿಸಿದರು, ಸರೋಜಾ ಬಲೂಚಗಿ ವಂದಿಸಿದರು.ನಂದಾ ಪಶುಪತಿಹಾಳ ನಿರೂಪಿಸಿದರು.