ಡೈಲಿ ವಾರ್ತೆ: 19/Sep/2024

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಸೂರಣಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯೂ ಶ್ರೀ ಗುರು ದಿಂಗಾಲೇಶ್ವರ ಇಂಗ್ಲಿಷ್ ಮೀಡಿಯಂ ಬಾಲೆ ಹೊಸೂರು ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶ್ರೀ ಬಿ.ಎಂ. ಯರಗುಪ್ಪಿ ಬಿ ಆರ್ ಪಿ ಶಿರಹಟ್ಟಿ ಇವರು ಮಾತನಾಡಿ ಇಲಾಖೆಯಿಂದ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ ಆದ್ದರಿಂದ ಸೂಕ್ತ ಪ್ರತಿಭೆಗಳನ್ನು ಗುರುತಿಸಿ ನಿಮ್ಮ ನಿರ್ಣಯಕ್ಕೆ ಬೆಲೆ ತರುವಂತೆ ನಿರ್ಣಯ ನೀಡಿ ಎಂದು ನಿರ್ಣಾಯಕರಿಗೆ ಕಿವಿಮಾತು ಹೇಳಿದರು. ಉದ್ಘಾಟನೆಯನ್ನು ಶ್ರೀ ವಾಸು ದೀಪಾಳಿ ಬಿ ಆರ್ ಪಿ ಶಿರಹಟ್ಟಿ ಇವರು ಉದ್ಘಾಟನೆ ಮಾಡಿ ಮಕ್ಕಳನ್ನು ಸರ್ವತೋಮುಖ ಅಭಿವೃದ್ಧಿಯತ್ತ ಒಯ್ಯಲು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅತಿ ಅವಶ್ಯವೆಂದು ಉದ್ಘಾಟಕರ ನುಡಿಯಲ್ಲಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಪರಶುರಾಮ ಮೈಲಾರಿ ವಹಿಸಿಕೊಂಡಿದ್ದರು, ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಖಾದರಸಾಬ್ ನದಾಫ್ ಮತ್ತು ಶ್ರೀಮತಿ ತೇಜಸ್ವಿನಿ ಬಡಿಗೇರ ಮಾಡಿದರು, ಸ್ವಾಗತವನ್ನು ಶ್ರೀ ಮುತ್ತಣ್ಣ ಹುಬ್ಬಳ್ಳಿ ಶಿಕ್ಷಕರು ಮಾಡಿದರು ಶ್ರೀ ಸಿದ್ದಪ್ಪ ಸಜ್ಜಗಾರ್ ಶಿಕ್ಷಕರು ಎಲ್ಲರಿಗೂ ಸ್ಮರಣಿಕೆಯನ್ನು ವಿತರಿಸಿದರು ಒಂದುನಾರ್ಪಣೆಯನ್ನು ಶ್ರೀಮತಿ ರಂಜಿತಾ ಮರಳಿಹಳ್ಳಿ ಇವರು ಮಾಡಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿಗಳಾದ ಸೂರಣಿಗಿ ಸಿಆರ್ಪಿ ಶ್ರೀ ಲೋಕೇಶ್ ಮಠದ, ಇದೇ ಸಂದರ್ಭದಲ್ಲಿ ಕೋಗುನೂರು ಸಿಆರ್ಪಿ ಶ್ರೀ ಸತೀಶ್ ಪಶುಪತಿಹಾಳ , ಶ್ರೀ ಎಂ ಎನ್ ಭರಮಗೌಡ್ರು, ಶ್ರೀ ಬಸವರಾಜ್ ಹತ್ತಿಕಾಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಹಾಲೇಶ್ ಜಾಲವಾಡಗಿ ಉಪಸ್ಥಿತರಿದ್ದರು.