ಡೈಲಿ ವಾರ್ತೆ: 22/Sep/2024

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಗೆ ಲಯನ್ಸ್ ಜಿಲ್ಲಾ ಪ್ರಥಮ ಜಿಲ್ಲಾ ಗವರ್ನರ್ ಲಯನ್ ಪಿ.ಎಮ್.ಜೆ.ಎಫ್. ಸಪ್ನಾ ಸುರೇಶ್ ಭೇಟಿ

ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಗೆ ಲಯನ್ಸ್ ಜಿಲ್ಲೆ 317 ಸಿ ಇದರ ಪ್ರಥಮ ಜಿಲ್ಲಾ ಗವರ್ನರ್ ಲಯನ್ ಪಿ.ಎಮ್.ಜೆ.ಎಫ್. ಸಪ್ನಾ ಸುರೇಶ್ ಸೆ. 21 ರಂದು ಶನಿವಾರ ಭೇಟಿ ನೀಡಿದರು.

ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ , ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ, ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ,& ಕೋಶಾಧಿಕಾರಿ ಲಯನ್ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಬಿ.ಓ.ಡಿ. ಸದಸ್ಯರ ಸಭೆ ನಡೆಸಲಾಯಿತು.

ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ ಯವರ ಪ್ರಾರ್ಥನೆ ಮೂಲಕ, ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕ್ಲಬ್ ನ ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ‌, ಈ ಸಾಲಿನ ಇಂದಿನ ತನಕದ ಕ್ಲಬ್ ಮಾಡಿದ ಸೇವಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು..

ಲಯನ್ ವಡ್ಡರ್ಸೆ ನವೀನ್ ಶ್ಯಾನುಭಾಗ್ ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಲಯನ್ Adv ಬನ್ನಾಡಿ ವಿನಯ್ ಶೆಟ್ಟಿ ಲಯನ್ ಕೋಡ್ ಆಫ್ ಕಂಡಕ್ಟ್ ಓದಿದರು.

ಲಯನ್ Prof. ಚಂದ್ರ ಶೇಖರ್ ಶೆಟ್ಟಿ ಯವರು ಲಯನ್ ಪಿ.ಎಮ್‌.ಜೆ.ಎಫ್ ಸಪ್ನಾ‌ ಸುರೇಶ್ ರವರನ್ನು ಪರಿಚಯಿಸಿದರು.

ಇವತ್ತಿನ ಕಾರ್ಯಕ್ರಮದ ಕೇಂದ್ರ ಬಿಂದು ಲಯನ್ಸ್ ಜಿಲ್ಲಾ ಪ್ರಥಮ ಜಿಲ್ಲಾ‌ ಗವರ್ನರ್ ಲಯನ್ ಪಿ.ಎಮ್‌.ಜೆ.ಎಫ್ ಸಪ್ನಾ‌ ಸುರೇಶ್ ಮಾತನಾಡಿ “ಕೇವಲ ಆರನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ, ಸಾಕಸ್ಟು ಸೇವಾ ಕಾರ್ಯಕ್ರಮಗಳನ್ನು ಮಾಡಿ, ಜಿಲ್ಲಾ ಲಯನ್ಸ್ ನಲ್ಲಿ ಅತ್ಯುತ್ತಮ ಕ್ಲಬ್ ಗಳಲ್ಲಿ ಒಂದಾಗಿ ಮೂಡಿ ಬಂದಿದೆ ಎಂದರಲ್ಲದೆ, ಕ್ಲಬ್ ನ ಸೇವಾ ಚಟುವಟಿಕೆ, ಕಾರ್ಯವೈಖರಿ ಗಳನ್ನು ನೋಡಿ, ಕ್ಲಬ್ ಸದಸ್ಯರ ಸಹಕಾರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ಸೇವಾ ಚಟುವಟಿಕೆಯ ಅಂಗವಾಗಿ ಅತ್ಯುತ್ತಮವಾಗಿ ಕರ್ತವ್ಯವನ್ನು ಮಾಡುತ್ತಿರುವ ಸೇವಾ ಮನೋಭಾವದ ಬನ್ನಾಡಿ ವಲಯದ ಲೈನ್ ಮ್ಯಾನ್ ಸುದರ್ಶನ್ ರವರನ್ನು ಸನ್ಮಾನಿಸಲಾಯಿತು.

ರೀಜನ್ V ರ ರೀಜನ್ ಚೆಯರ್ ಪರ್ಸನ್ ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಶುಭಾಶಂಸನೆ‌‌ ಮಾಡಿದರು.

ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಹುಟ್ಟುಹಬ್ಬ ವನ್ನು ಆಚರಿಸಿಕೊಂಡ ಲಯನ್ ಎಮ್.ಜೆ.ಎಫ್ ವಸಂತ ಶೆಟ್ಟಿ ಅಚ್ಲಾಡಿ ಸೂರಿಬೆಟ್ಟು ಇವರಿಗೆ ಕ್ಲಬ್ ನ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಯಿತು.

ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಿದರು.

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಕೋಶಾಧಿಕಾರಿ ಲಯನ್ ಬನ್ನಾಡಿ ಸೂರ್ಯಕಾಂತ್‌ ಶೆಟ್ಟಿ ವಂದಿಸಿದರು.

ಲಯನ್ ಎಮ್.ಜೆ.ಎಫ್‌ ವಸಂತ ಶೆಟ್ಟಿ ಅಚ್ಲಾಡಿ ಸೂರಿಬೆಟ್ಟು, ಲಯನ್ Prof. ಕಲ್ಕಟ್ಟೆ ಚಂದ್ರ ಶೇಖರ ಶೆಟ್ಟಿ,
ಲಯನ್ ಹಾರ್ಡ್ ವೇರ್ ಚಂದ್ರ ಶೆಟ್ಟಿ ಯಾಳಕ್ಲು, ಲಯನ್ Adv ವಿನಯ್ ಶೆಟ್ಟಿ ಬನ್ನಾಡಿ, ಲಯನ್ ವಡ್ಡರ್ಸೆ ನವೀನ್ ಶ್ಯಾನುಭಾಗ್ ಇಂದಿನ‌ ಕಾರ್ಯಕ್ರಮದ “ಹೋಸ್ಟ್” ಗಳಾಗಿದ್ದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.