ಡೈಲಿ ವಾರ್ತೆ: 23/Sep/2024

ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತ್ಯು!

ಮಂಜೇಶ್ವರ: ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಕಡಂಬಾರ್ ಎಂಬಲ್ಲಿ ನಡೆದಿದೆ.

ಕಡಂಬಾರ್ ನ ಹ್ಯಾರಿಸ್ ಹಾಗೂ ಕೈರುನ್ನಿಸ ದಂಪತಿ ಯವರ ಒಂದು ವರ್ಷದ ಫಾತಿಮಾ ಎಂಬ ಮಗು ಮನೆಯಲ್ಲಿ ಆಟ ಆಡುತ್ತಾ ಬಾತ್ ರೂಮ್ ಒಳ ಬಂದು ಅಲ್ಲಿ ನೀರು ತುಂಬಿದ ಬಕೆಟ್ ಗೆ ತಲೆ ಹಾಕಿದ ಪರಿಣಾಮ ಉಸಿರುಕಟ್ಟಿ ಮೃತಪಟ್ಟಿರುತ್ತದೆ.

ಮನೆಯವರು ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆಗಲೇ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.