ಡೈಲಿ ವಾರ್ತೆ: 29/Sep/2024
ಡೈಲಿ ವಾರ್ತೆ.ವರದಿ: ಶಿವಾನಂದಸ್ವಾಮಿಜೀ.ಆರ್.ಬಿದರಕುಂದಿ.ದೊರೆ.
ಪೋಲಿಸ್ ಬಿಗಿ ಬಂದು ಬಸ್ತಿಯಿಂದ ಡಬ್ಬಾ ಅಂಗಡಿಗಳ ತರವು ಕಾರ್ಯಚರಣೆ
ವಿಜಯಪುರ:(ಸ.29) ಮುದ್ದೇಬಿಹಾಳ ಪಟ್ಟಣದಲ್ಲಿ ಅತಿಯಾದ ಜನದಟ್ಟನೆವಾಗಿ ಅಪಘಾತಗಳು ಹೆಚ್ಚಾಗಿರುದರ ಪರಿಣಾಮ ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ರವಿವಾರ ಬೆಳ್ಳಂಬೆಳಿಗ್ಗೆ ಪುರಸಭೆ ಆಡಳಿತ ಶಾಕ್ ನೀಡಿದೆ
ಬಸವೇಶ್ವರ ವೃತ್ತದ ಬಳಿ ಪುರಸಭೆಯ ಜಾಗೆಯಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಸಿ ಸಫಲವಾಯಿತು.
ಈ ಮೊದಲು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಕೊಳ್ಳುವಂತೆ ಪುರಸಭೆಯ ಆಡಳಿತದಿಂದ ಮೂರು ದಿನಗಳ ಕಾಲ ದ್ವನಿವರ್ದಕಗಳಿಂದ ಖಡಕ್ ಸೂಚನೆ ನೀಡಿದ್ದರು. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರುವುಗೊಳಿಸಿಕೊಳ್ಳುವದಾಗಿ ಕೆಲ ದಿನಗಳ ಅವಕಾಶವನ್ನು ಬೇಡಿದ್ದರುವ ಎನ್ನಲಾಗಿದೆ,ಆದರೆ ಮೂರು ದಿನಗಳ ನಿರಂತರ ವಾಹನದ ಮುಖಾಂತರ ದ್ವನಿ ವರ್ದಕದಿಂದ ತೆರುವು ಕಾರ್ಯಚರಣೆಯ ಮಾಹಿತಿ ನೀಡಿದ್ದರು , ವ್ಯಾಪಾರಿಗಳು ಇದಲ್ಲದಕ್ಕು ಕೀವುಗೋಡದೆ ತಮ್ಮ ಕಾರ್ಯ ಮುಂದುವರೆಸಿದ್ದರು ಆದರೆ ಪುರಸಭೆಯಿಂದ ಮೂರು ದಿನಗಳ ಗಡುವು ನೀಡಿದ್ದರು. ಗಡುವಿನ ಅಂತಿಮ ದಿನದಂದು ಯಾವುದೇ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸದ ಹಿನ್ನೆಲೆ ಜೆಸಿಬಿಗಳು ಬೆಳ್ಳಂಬೇಳ್ಳಗ್ಗೆ ಪಟ್ಟಣದಲ್ಲಿ ಘರ್ಜನೆಯ ಮುಖಾಂತರ ತೇರುವುಗೋಳಿಸಲಾಯಿತು.
ಕಾರ್ಯಾಚರಣೆ ವೇಳೆ ಡೈಲಿ ವಾರ್ತೆಯೊಂದಿಗೆ ಮಾತನಾಡಿದ ಸ್ಥಳೀಯ ಡಬ್ಬಾ ಅಂಗಡಿಗಳ ವ್ಯಾಪಾರಸ್ಥರು ಡಬ್ಬಾ ಅಂಗಡಿಗಳಿಂದ ಪಟ್ಟಣದಲ್ಲಿ ಜನದಟ್ಟನೆಯಾಗುತ್ತಿಲ್ಲಾ ದ್ವೀಚಕ್ರವಾಹನ ಹಾಗೂ ಅತಿಯಾದ ಭಾರವನ್ನು ಹಾಕಿಕೊಂಡ ಸಂಚರಿಸುವ ಟಿಪ್ಪರಗಳ ಅವೈಜ್ಞಾನಿಕ ಚಲನೆಯಿಂದ ಅಪಘಾತಗಳು ,ಟ್ರಾಪೀಕ್ ಆಗುತ್ತಿದೆ, ಪುರಸಭೆಯವರು ನಮ್ಮ ಮೇಲೆ ಟ್ರಾಪೀಕ್ ರೂಲ್ಸ್ ಹೇಳಿ ತೇರುವುಗೋಳಿಸುತ್ತಿರುವದರಿಂದ ನಮಗೆ ತುಂಭಾ ತೊಂದರೆಯಾಗುತ್ತದೆ ನಮ್ಮ ಸಂಸಾರ ಈ ಅಂಗಡಿಗಳಿಂದ ನಡೆಯುತ್ತಿದೆ,ಈ ಪುರಸಭೆಯ ವರ್ತನೆಯಿಂದ ನಮ್ಮ ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿಕೋಳ್ಳಬೇಕು ಎಂದು ಆರೋಪಿಸಿದರು..
ತೆರವುಗೊಳಿಸಿಕೊಳ್ಳುವಂತೆ ಧ್ವನಿವರ್ದಕದ ಮುಖಾಂತರ ಪ್ರಕಟಣೆ ಹೊರಡಿಸಿದ್ದರು. ಇಷ್ಟಾದರೂ ವ್ಯಾಪಾರಸ್ಥರು ತೆರುವುಗೊಸದ ಹಿನ್ನಲೆಯಲ್ಲಿ ರವಿವಾರ ಬೆಳ್ಳಂಬೆಳಿಗ್ಗೆ 6 `ಗಂಟೆಗೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜೀವ ತಿಪ್ಪಾರೆಡ್ಡಿ, ಸಿಬ್ಬಂದಿಗಳೊಂದಿಗೆ ರವಿವಾರ ಕಾರ್ಯಾಚರಣೆಗೆ ಇಳಿದು ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಪುರಸಭೆಯಿಂದ ಮುಖ್ಯ ಬಜಾರ್ ತೆರುವು ಕಾರ್ಯವಾಗಲಿ: ಪಟ್ಟಣದಲ್ಲಿ ಅಭಿವೃದ್ಧಿ ಹಾಗೂ ಅಪಘಾತಗಳ ನೆಪದಲ್ಲಿ ಬರಿ ಬಡವರ ಡಬ್ಬಾ ಅಂಗಡಿಗಳು ಮಾತ್ರ ತೆರುವುಗೊಳಿಸಬಾರದು, ಪಟ್ಡಣದ ಸಂಪೂರ್ಣವಾಗಿ ಬಸವೇಶ್ವರ ವೃತ್ತದಿಂದ ಕನ್ನಡ ಶಾಲೆಯ ಮುಖಾಂತರ ಗ್ರಾಮದೇವತೆಯ ಪಾದಗಟ್ಟಿ ಹಾಗೂ ಇಂದಿರಾ ವೃತ್ತದವರೆಗೂ ಮುಖ್ಯ ಬಜಾರನಲ್ಲಿಯೂ ಮಾಸ್ಟರ್ ಪ್ಲಾನ್ ನಂತೆ ತೆರುವು ಮಾಡಿ ತಮ್ಮ ಗಟ್ಟಿತನ ಪ್ರದರ್ಶನ ಮಾಡಲಿ ಅದು ಬಿಟ್ಟು ಶ್ರೀಮಂತರ ಅಂಗಡಿಗಳು ಇದ್ದಾವೆ ಎಂದು ಸುಮ್ಮನೆ ಬಿಟ್ಟರೆ ನಾವು ಎಲ್ಲಾ ಡಬ್ಬಾ ಅಂಗಡಿಗಳ ಮಾಲಿಕರು ಕೂಡಿಕೊಂಡು ಪುರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.