ಡೈಲಿ ವಾರ್ತೆ: 29/Sep/2024
ಡೈಲಿ ವಾರ್ತೆವರದಿ: ಶಿವಾನಂದಸ್ವಾಮಿಜೀ ಆರ್.ಬಿದರಕುಂದಿ ದೊರೆ
ಪಿಡಿಓ ಆನಂದ ಹಿರೇಮಠ ಅಧ್ಯಕ್ಷ ಸೇರಿ ಲಕ್ಷಾಂತರ ಅವ್ಯವಹಾರ : ಸೂಕ್ತ ಕ್ರಮಕ್ಕೆ ಆಗ್ರಹ !
ವಿಜಯಪುರ.(ಸ.29) ಸರಕಾರಿ ಕೆಲಸ ದೇವರ ಕೆಲಸ ಎಂದು ಪ್ರಮಾಣ ವಚನದ ಸಂದೇಶದ ಮುಖಾಂತರ ಸಾರುವ ಅಧಿಕಾರಿಗಳು ಸರಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ನೀಡುತ್ತಾರೆ ? ಎಂಬುವದನ್ನು ಮನದಟ್ಟು ಮಾಡಿಕೊಳ್ಳುವ ಸ್ಥೀತಿ ಬಂದೋದಗಿದೆ,
ಹೌದು ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಪಂಚಾಯತ ವ್ಯಾಪ್ತೀಯ ಅಧ್ಯಕ್ಷರಾದ ಮಂಜುನಾಥಗೌಡ ಪಾಟೀಲ್ ತವರೂರಲ್ಲಿಯೇ ಅಧ್ಯಕ್ಷ ಹಾಗೂ ಪಿಡಿಓ ಆನಂದ ಹಿರೇಮಠ ಇಬ್ಬರು ಕಾಮಗಾರಿಯ ಅಪೂರ್ಣ ಹಾಗೂ ಕಳಪೆ ಮಟ್ಟದ ಸಲಕರಣೆಹಳನ್ನು ಬಳಸಿಕೊಂಡು ಲಕ್ಷಾಂತರ ಅನುಧಾನವನ್ನು ಕಾಮಗಾರಿ ನಡೆಸದೆ ಲೂಟಿ ಮಾಡಿದ್ದಾರೆಂದು ಗ್ರಾಮದ ಯುವ ಮುಖಂಡ ಅಶೋಕ ರಾಠೋಡ ಆರೋಪ ಮಾಡಿದ್ದಾರೆ.
ಈ ಕುರಿತು ಡೈಲಿ ವಾರ್ತೆಯೊಂದಿಗೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳು ಸುಧಾರಣೆ ಆಗಬೇಕಾದರೆ ಪಿಡಿಓಗಳಿಂದ ಮಾತ್ರ ಸಾಧ್ಯ ಯಾಕಂದರೆ ಪಂಚಾಯತ ಮಟ್ಟದಲ್ಲಿ ಏನೇ ಸಮಸ್ಯೆಯಾದರು ಇವರನ್ನೇ ಜನಸಾಮಾನ್ಯರು ಕೇಳಬೇಕು ಆದರೆ ಇಲ್ಲಿ ಸಮಸ್ಯೆ ಬಗೆ ಹರಿಸುವರೇ ಸಮಸ್ಯೆಯನ್ನು ಮಾಡಿದ್ದಾರೆಂದರೇ ? ಗ್ರಾಮೀಣ ಪ್ರದೇಶದ ಜನರು ಯಾರಿಗೆ ಕೇಳಬೇಕು ಎಂದು ಪ್ರಗತಿಪರ ಜನರು ಪ್ರಶ್ನೆ ಮಾಡುತ್ತಿದ್ದಾರೆ ?..
ನೇಬಗೇರಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಿಲ್ಟರ್ ವಾಟರ್ 90000 ರೂಪಾಯಿದಲ್ಲಿ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿದೆ ಆದರೆ ಶಾಲೆಯಲ್ಲಿ ಇರುವುದು ಮಾತ್ರ 10 ಸಾವಿರ ರೂಪಾಯಿ ನೀರಿನ ಪಿಲ್ಟ್ ವಾಟರ್..
ಹಾಗೂ ಅದೇ ರೀತಿ ಮಕ್ಕಳಿಗೆ ಲೇಜರ್ ಲೈಟ್ ಹಾಕಿ ಮಕ್ಕಳಿಗೆ ಶಾಲೆಯಲ್ಲಿ ಚಿತ್ರಣ ತೋರಿಸಲು 90000 ಸಾವಿರ ರೂಪಾಯಿ ಎಇಡಿ ಲೈಟ್ ಖರೀದಿ ಮಾಡಿದ್ದೇವೆ ಎಂದು ಹಣ ತಗೆದುಕೊಂಡಿದ್ದಾರೆ ಅಲ್ಲಿರುವುದು ಮಾತ್ರ ಫಿಲ್ಪ್ ಕಾರ್ಟ್ ಅಲ್ಲಿ ಖರೀದಿ ಮಾಡಿದ 3000 ರೂಪಾಯಿ ಎಇಡಿ ಲೈಟ್. ಹಾಗೂ ಸುಮಾರು ಹಿರಿಯ ಪ್ರಾಥಮಿಕ ಹಾಗೂ ಎಲ್ಪಿಎಸ್ ಶಾಲೆ ಅಂಗನವಾಡಿ ವಿವಿಧ ರೀತಿ ಕಿಟಕಿ, ಕುಂತುಕೊಳ್ಳುವ ಬೆಂಚು, ಕಂಪೌಂಡ್ ನಿರ್ಮಾಣ ಮಾಡಿ ಸಾಂಸ್ಕ್ರತಕ ಚಿತ್ರಗಳನ್ನೇ ಬಿಡಿಸದೆ ಬಿಲ್ ಮಂಜೂರು ಮಾಡಿಸಿದ್ದಾರೆ ಈ ಅಕ್ರಮದಲ್ಲಿ ಪಿಡಿಓ ಹಾಗೂ ಸದ್ಯದ ಅಧ್ಯಕ್ಷರ ಸಮ್ಮುಖದಲ್ಲಿಯೇ ಅವ್ಯವಹಾರ ನಡೆದಿದೆ ಈ ಅವ್ಯವಹಾರದಲ್ಲಿ ಸುಮಾರು ಲಕ್ಷಾಂತರ ಅನುಧಾನ ಗುಳುಂ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ,
ಈ ಅಕ್ರಮದ ಕುರಿತು ಹಿರಿಯ ಅಧಿಕಾರಿಗಳ ಪಾಲು ಇದೆ ಎಂದು ಹೇಳಲಾಗುತ್ತಿದೆ ಆದರೆ ಸದರಿ ಅಕ್ರಮದ ವರದಿಗಳನ್ನು ನೋಡಿ ಶೀಘ್ರವೇ ತಾಲೂಕು ಪಂಚಾಯತ ಅಧಿಕಾರಿಯಾದ ಇಓರವರು ಈ ಗ್ರಾಮಕ್ಕೆ ಬೇಟೆ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಪಿಡಿಓ ಅವರನ್ನು ಅಮನತು ಮಾಡಬೇಕು ಹಾಗೂ ಅಧ್ಯಕ್ಷರ ಮೇಲೆ ಅವ್ಯವಹಾರದಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆಯಲ್ಲಿ ನೇಭಗೇರಿ ಗ್ರಾಮದಲ್ಲಿ ನಡೆದ ಅವ್ಯವಹಾರದ ತನಿಖೆಯನ್ನು ಸೂಕ್ತವಾಗಿ ಮಾಡಿ ಇವರ ಮೇಲೆ ಕ್ರಮ ಜರುಗಿಸದೆ ಇದ್ದರೆ ಲೋಕಾಯುಕ್ತವರಿಗೆ ದೂರು ಕೊಟ್ಟು ಇದರಲ್ಲಿ ಅವ್ಯವಹಾರ ಮಾಡಿದ ಅಧ್ಯಕ್ಷ ಪಿಡಿಓ ಅವರನ್ನು ತನಿಖೆ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.