ಡೈಲಿ ವಾರ್ತೆ: 30/Sep/2024

ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ಉಡುಪಿ: ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಸೆ. 28 ರಂದು ಶನಿವಾರ ಉಡುಪಿ ಬ್ರಹ್ಮಗಿರಿ ಸರ್ಕಲ್ ನ ಲಯನ್ಸ್ ಕ್ಲಬ್ ಹಾಲ್ ನಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವಮಾನವಾಧಿಕಾರ ಹಕ್ಕು ಲೋಕ ಪರಿಷತ್ ಅಧ್ಯಕ್ಷರಾದ ಸಮಾಜ ರತ್ನ ಲಯನ್ ಡಾ. ಶಂಕರ್ ಶೆಟ್ಟಿ ವಹಿಸಿದರು.
ಅವರು ಮಾತನಾಡಿ ವಿಶ್ವ ಮಾನವ ಅಧಿಕಾರದಲ್ಲಿ ಜಾತಿ, ಮತ, ಭೇದ, ಭಾವ,ಅನ್ಯಾಯ, ಅತ್ಯಾಚಾರ,ಮೋಸ,ಕಪಟ ಇದು ಯಾವುದಕ್ಕೂ ಆಸ್ಪದ ಕೊಡುವುದಿಲ್ಲ.
ಒಂದರ ಮುಂದೆ ಎರಡು ಸೊನ್ನೆ ಇಟ್ಟರೆ ನೂರು ಆಗುತ್ತೆ, ಎರಡು ಸೊನ್ನೆಯ ಮುಂದೆ ಒಂದು ಇಟ್ಟರೆ ಅದು ಸೊನ್ನೆ ಸೊನ್ನೆ ಒಂದು ಆಗುತ್ತೆ. ಅದು ಎರಡು ನಿಮ್ಮ ಕೈಯಲ್ಲಿದೆ ಆದ್ದರಿಂದ ಮಾನವ ಹಕ್ಕು ಅಧಿಕಾರ ಎಂದ್ರೆ ಪ್ರತಿಯೊಬ್ಬನಿಗೆ ತನ್ನದೇ ಆದಂತಹ ಅಧಿಕಾರ ಇದೆ ಎಂದು ಲಯನ್ ಡಾ. ಶಂಕರ್ ಶೆಟ್ಟಿ ಹೇಳಿದರು.

ಮುಖ ಅತಿಥಿಗಳಾದ ಹಿರಿಯ ನ್ಯಾಯವಾದಿ ಕುಂದಾಪುರ ರವಿಕಿರಣ್ ಮುರ್ಡೇಶ್ವರ್ ಅವರು ಮಾತನಾಡಿ ಮಾನವ ಹಕ್ಕು ಎನ್ನುವುದು ಅದು ಯಾವುದೇ ಸರಕಾರದಿಂದಾಗಲಿ, ನಮ್ಮ ಭಾರತದ ಸಂವಿಧಾನದಿಂದಾಗಲಿ ಅಥವಾ ನ್ಯಾಯಾಲಯದಿಂದಾಗಲಿ ನೀಡಿದ ಹಕ್ಕು ಅಲ್ಲ. ಆ ಮಾನವ ಹಕ್ಕುಗಳು ನಮಗೆ ಪ್ರಾಪ್ತವಾದದ್ದು ನಾವು ಮಾನವರಾಗಿ ಜನಿಸಿದ್ದರಿಂದ ಅದು ನಮ್ಮ ಹಕ್ಕು ಆಗಿದೆ. ಅದಕ್ಕಾಗಿ ನ್ಯಾಯಾಲಯವು ನಮಗೆ ಮಾನವ ಹಕ್ಕುಗಳು ಇದೆ ಎಂದು ದೃಢಪಡಿಸುತ್ತಿದೆ ಹಾಗೂ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದೆ.
ಆದ್ದರಿಂದ ನಾವು ಜನಿಸಿದ ಕೂಡಲೇ ಮಾನವ ಹಕ್ಕುಗಳು ನಮಗೆ ಬಂದು ಬಿಡುತ್ತದೆ ಎಂದು ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶ್ವಮಾನವಾಧಿಕಾರ ಹಕ್ಕು ಲೋಕ ಪರಿಷತ್ ಅಧ್ಯಕ್ಷರಾದ ಡಾ. ಲಯನ್ ಶಂಕರ್ ಶೆಟ್ಟಿ ಹಾಗೂ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಅವರ ಸಮ್ಮುಖದಲ್ಲಿ ನೂತನ
ಅಧ್ಯಕ್ಷರಾಗಿ ಎಂ. ಇಕ್ಬಾಲ್ ಕುಂಜಿ ಬೆಟ್ಟು ಪದ ಪ್ರಧಾನಗೈದರು. ಹಾಗೂ ನೂತನ ಪದಾಧಿಕಾರಿಗಳನ್ನು ಗೌರವ ಸನ್ಮಾನ ಮಾಡಲಾಯಿತು.

ಹಾಗೂ ಸಮಾಜ ರತ್ನ ಲಯನ್ ಡಾ. ಶಂಕರ್ ಶೆಟ್ಟಿ ಹಾಗೂ ಹಿರಿಯ ನ್ಯಾಯವಾದಿ ಕುಂದಾಪುರ ರವಿಕಿರಣ್ ಮುರ್ಡೇಶ್ವರ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ರಾಜು ಅಮೀನ್ ಆರ್ ಟಿಐ ಮಾಹಿತಿ ಹಕ್ಕು ಪುಸ್ತಕ ಬಿಡುಗಡೆ ಮಾಡಿದರು.

ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಎಂ. ಫಾರೂಕ್ ಚಂದ್ರನಗರ ಹಾಗೂ ಕೃಷಿಕರಾದ ಆಲ್ಬಾಡಿ ಸಂತೋಷ್ ಶೆಟ್ಟಿ ಇವರಿಗೆ ಕಾಯಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುಂದಾಪುರ ಕೋಡಿ ನಾಗೇಶ್ ಕಾಮತ್ ಅವರಿಗೆ ಏಕಲವ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಮ್ಮದ್ ಇಕ್ಬಾಲ್ ಮನ್ನಾ ಹಾಗೂ ವಡ್ಡರ್ಸೆ ದೇವೇಂದ್ರ ಸುವರ್ಣ ಅವರಿಗೆ ವಿವೇಕಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಹಾಗೂ ನಿಯೋಜ ರಾಜ್ಯ ಕಾನೂನು ಸಲಹೆಗಾರರಾದ ಶ್ಯಾಮಸುಂದರ ನಾಯರಿ, ಉಡುಪಿ ವಕೀಲರಾದ ಅಖಿಲ್ ಬಿ. ಹೆಗ್ಡೆ, ಇವರನ್ನು ಸನ್ಮಾನಿಸಲಾಯಿತು.

ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ಉಡುಪಿ ಜಿಲ್ಲೆ ನೂತನ ಪದಾಧಿಕಾರಿಗಳಾದ
ಉಪಾಧ್ಯಕ್ಷರು ಸಂತೋಷ್ ಕುಮಾರ್ ಶೆಟ್ಟಿ, ಕೃಷಿಕರು ಆಲ್ಬಾಡಿ, ಜೊತೆ ಕಾರ್ಯದರ್ಶಿ ಎನ್. ಸದಾಶಿವ ಕೋಟೆಗಾರ್, ಎನ್ ಜಿ ಹೌಸ್, ಕುಂದಾಪುರ
ನಿಯೋಜಿತ ಉಪಾಧ್ಯಕ್ಷ ಸುಧೀರ್ ಕಾಳಾವರ, ಜಿಲ್ಲಾ ಕಾನೂನು ಸಲಹೆಗಾರ ವಕೀಲರಾದ ಹರ್ಷರಾಜ್ ಸಾಸ್ತಾನ, ಸಲಹೆಗಾರರಾದ ಪ್ರದೀಪ್ ರಾವ್ ಪಡುಕೆರೆ,
ಜನ ಸಂಪರ್ಕಾಧಿಕಾರಿ ಕೆಂಚನೂರು ಮಹೇಶ್ ಉಡುಪ, ನೂತನ ಸದಸ್ಯರು
ನಾಗೇಶ್ ಕಾಮತ್ (MA MED), ಕುಂದಾಪುರ ಕೋಡಿ,
ಶ್ರೀನಿವಾಸ, ಕೋಟತಟ್ಟು ಪಡುಕೆರೆ, ವಾಸುದೇವ ನಾರಾಯಣ ಮೊಗವೀರ, ಭಟ್ಕಳ, ಉದಯ ದೇವಾಡಿಗ, ಕೋಟೇಶ್ವರ,ವಿಶ್ವಾಸ್ ಜಿ. ಕೆ.. ಉಪ್ಪಿನಕುದ್ರು, ಗಂಗೊಳ್ಳಿ, ಅಶೋಕ್ ದೇವಾಡಿಗ, ಹೆಮ್ಮಾಡಿ (ಕೃಷಿಕರು) ಇವರನ್ನು ಗುರುತಿಸಿ ಗೌರವಿಸಲಾಯಿತು.