ಡೈಲಿ ವಾರ್ತೆ: 30/Sep/2024

ಬೆಂಗಳೂರಿನಲ್ಲಿ ನಡೆದ ಪ್ರತಿಭಾ ಶೋಧನೆ ಹಾಗೂ ಅಭಿನಂದನೆ ಕಾರ್ಯಕ್ರಮ: ಪ್ರತಿಭೆಗಳು ಮನುಷ್ಯನ ಅಸ್ಥಿರತೆಯನ್ನ ಹೆಚ್ಚಿಸುತ್ತದೆ – ಆರ್. ಅಶೋಕ್. ಪತ್ರಕರ್ತ, ಅಂಕಣಕಾರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಸೇರಿ, ರಾಜ್ಯದ 650 ವಿವಿಧ ವಿಭಾಗದ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಗೌರವಾರ್ಪಣೆ

ಬೆಂಗಳೂರು: ಪ್ರತಿಭೆಗಳು ಮನುಷ್ಯನನ್ನು ಹುಡುಕಿ ಬರಬೇಕು, ಅದಲ್ಲದೆ ಸಾಧನೆ ಮನುಷ್ಯನಿಗೆ ಬೇಕಾಗುವಂತಹ ವಸ್ತುನಿಷ್ಠವಾದಂತಹ ಸ್ಥಾನಮಾನಗಳು ವ್ಯಕ್ತಿಯ ಹಿರಿಮೆಯನ್ನ ಹೆಚ್ಚಿಸುತ್ತದೆ. ಅದಲ್ಲದೆ ವ್ಯತಿರಿಕ್ತವಾದ ಅಂತಹ ಆಯ್ಕೆಗಳು ಸಮಾಜದ ಉತ್ಕೃಷ್ಟ ಸ್ಥಾನವನ್ನು ನೀಡುವುದರೊಂದಿಗೆ ಬದುಕಿನ ಅವಿಭಾಜ್ಯ ಅಂಗವನ್ನು ಎತ್ತರಕ್ಕೆ ಬೆಳೆಸುವಲ್ಲಿ ಪ್ರಯತ್ನಿಸುತ್ತದೆ. ಸಾಧನೆ ಪ್ರತಿಭೆಗಳು ಮನುಷ್ಯನ ಇನ್ನಷ್ಟು ಹಿರಿಮೆಗೆ ಸ್ನಾನಮಾನ ತಂದುಕೊಡುತ್ತದೆ. ಇಂದಿನ ಕಾರ್ಯಕ್ರಮಗಳು ಸಮಾಜಕ್ಕೆ ಮತ್ತಷ್ಟು ಸಂದೇಶ ರವಾನಿಸುವಲ್ಲಿ ಪ್ರೇರಣೆಯಾಗುತ್ತದೆ” ಎಂದು ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗದಲ್ಲಿ ಮಾಧ್ಯಮ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ, ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿ, ಇದೀಗ 2023/2024ನೇ ಸಾಲಿನ ಬಸನಗುಡಿ ವಿಧಾನಸಭಾ ಕ್ಷೇತ್ರದ ವಿವಿಧ ಮಾಧ್ಯಮಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರು ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ “ಮಾಧ್ಯಮ ಪ್ರಶಸ್ತಿ 2024 ” ಆಯ್ಕೆಯಾಗಿ, ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಶ್ರೀ ತೇಜಸ್ವಿ ಸೂರ್ಯ, ಮಾನ್ಯ ಲೋಕಸಭಾ ಸದಸ್ಯರು ಬೆಂಗಳೂರು ದಕ್ಷಿಣ, ಡಾ. ಸಿ. ಎನ್ ಮಂಜುನಾಥ್ ಮಾನ್ಯ ಲೋಕಸಭಾ ಸದಸ್ಯರು, ಬೆಂಗಳೂರು ಗ್ರಾಮಾಂತರ, ಶ್ರೀ ಎಲ್ಎ. ರವಿ ಸುಬ್ರಮಣ್ಯ ಶಾಸಕರು ಬಸವನಗುಡಿ ವಿಧಾನಸಭಾ ಕ್ಷೇತ್ರ, ಶ್ರೀ ಸಿ.ಕೆ ರಾಮಮೂರ್ತಿ ಶಾಸಕರು ಜಯನಗರ, ವಿಧಾನಸಭಾ ಕ್ಷೇತ್ರ ಮತ್ತು ಅಧ್ಯಕ್ಷರು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ, ಶ್ರೀ ಗುರುಜಾಲ ಜಗನ್ಮೋಹನ್ ಶಾಸಕರು ಚಿತ್ತೂರು ಆಂಧ್ರಪ್ರದೇಶ, ಶ್ರೀ ಕೆ ಬಾಗೇಗೌಡರು ಜೆಡಿಎಸ್ ಮುಖಂಡರು ಸಮಾಜಸೇವಕರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಎಂ. ವೆಂಕಟೇಶ್(ಸಂಗಾತಿ ) ವೆಂಕಟಪೂರ್ವ ಬಿಬಿಎಂಪಿ ಸದಸ್ಯರು ಕತ್ರಿಗುಪ್ಪೆ ವಾರ್ಡ್ ಹಾಗೂ ವಿದ್ಯಾಪೀಠ ವಾರ್ಡ್, ಹಾಗೂ ಮತ್ತಿತರರು ಗಣ್ಯರೂ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಪದವೀಧರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶಾಶ್ವತ ಫಲಕವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಹಿರಿಯ ದಂಪತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಪ್ರತಿಭಾ ಶೋಧನೆ ಮತ್ತು ಅಭಿನಂದನೆ ಕಾರ್ಯಕ್ರಮ ವಿಶೇಷವಾಗಿ ಜರುಗಿತು. ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರ,ಶ್ರೀನಗರ,ಗಿರಿನಗರ, ಕತ್ರಿಗುಪ್ಪೆ ಮತ್ತು ವಿದ್ಯಾಪೀಠ ವಾರ್ಡ್ಗಳಲ್ಲಿ ನಡೆದ ವಿನೂತರ ಕಾರ್ಯಕ್ರಮ ಇದಾಗಿತ್ತು. ಬಿಬಿಎಂಪಿ ನಿಕಟಪೂರ್ವ ಸದಸ್ಯರಾದ ಎಂ ವೆಂಕಟೇಶ್ವರವರ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ, ರಾಜ್ಯದ ಹಾಗೂ ಬೆಂಗಳೂರಿನ ವಿವಿಧ ಸಾಧಕರ ಶೋಧನಾ ಕಾರ್ಯಕ್ರಮ ವಿಶೇಷವಾಗಿ ಜರುಗಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಬಸವನಗುಡಿ ಸದಸ್ಯರು ನಿರೂಪಿಸಿ ವಂದಿಸಿದರು.