ಡೈಲಿ ವಾರ್ತೆ: 07/OCT/2024
ರೈಲ್ವೆ ಹಳಿ ಮೇಲೆ ಮಣ್ಣು ಸುರಿದ ಕಿಡಿಗೇಡಿಗಳು – ಲೋಕೊಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಬಾರೀ ದುರಂತ!
ರಾಯ್ ಬರೇಲಿ: ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಗ್ಯಾಸ್ ಸಿಲಿಂಡರ್, ಕಬ್ಬಿಣದ ರಾಡ್ ಹೀಗೆ ನಾನಾ ರೀತಿಯಲ್ಲಿ ರೈಲು ಹಾಲಿ ತಪ್ಪಿಸಲು ಯತ್ನಗಳು ನಡೆದಿತ್ತು ಇದೀಗ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ದುಷ್ಕರ್ಮಿಗಳು ರೈಲು ಹಳಿ ತಪ್ಪಿಸುವ ಮತ್ತೊಂದು ಕೃತ್ಯ ಎಸಗಿದ್ದು ಲೊಕೊ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದಂತಾಗಿದೆ.
ದುಷ್ಕರ್ಮಿಗಳ ತಂಡ ಖೀರುನ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುರಾಜ್ ಸಿಂಗ್ ರೈಲು ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಮಣ್ಣು ಸುರಿದಿದ್ದಾರೆ ಆದರೆ ಲೊಕೊ ಪೈಲಟ್ ಮಣ್ಣಿನ ರಾಶಿಯನ್ನು ಕಂಡು ರೈಲನ್ನು ನಿಲ್ಲಿಸಿ ಸಂಭವನೀಯ ಅಪಘಾತವನ್ನು ತಪ್ಪಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಅಧಿಕಾರಿ ದೇವೇಂದ್ರ ಭಡೋರಿಯಾ ಘಟನೆ ನಡೆದ ಕೆಲ ದೂರದಲ್ಲಿ ರಸ್ತೆ ಕಾಮಗಾರಿ ನಡೆಯುತಿತ್ತು ಈ ವೇಳೆ ಅಲ್ಲಿದ್ದ ಮಣ್ಣನ್ನು ಡಂಪರ್ ಚಾಲಕ ರೈಲು ಹಳಿ ಮೇಲೆ ಸುರಿದು ಪರಾರಿಯಾಗಿದ್ದಾನೆ. ಇದೆ ಸಮಯದಲ್ಲಿ ರಾಯ್ ಬರೇಲಿ – ರಘುರಾಜ್ ಸಿಂಗ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶಟಲ್ ರೈಲು ಬಂದಿದ್ದು ಈ ವೇಳೆ ಲೊಕೊ ಪೈಲೆಟ್ ಮಣ್ಣಿನ ದಿಬ್ಬವನ್ನು ಕಂಡು ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ ಇದರಿಂದ ಸಂಭವನೀಯ ಅವಘಡ ತಪ್ಪಿದಂತಾಗಿದೆ ಎನ್ನಲಾಗಿದೆ.