ಡೈಲಿ ವಾರ್ತೆ: 13/OCT/2024
ಮಲ್ಪೆ ಸಹಕಾರಿ ಬ್ಯಾಂಕ್ ನಿಂದ ವಂಚನೆಗೊಳಗಾಗಿ ನೊಂದ ಸಂತ್ರಸ್ತರ ಸಭೆ – ಸಮಸ್ಸೆ ಆಲಿಸಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹಾಗೂ ಪ್ರಸಾದ್ ರಾಜ್ ಕಾಂಚನ್
ಬ್ರಹ್ಮಾವರ: ನಕಲಿ ದಾಖಲೆ ಸೃಷ್ಟಿಸಿ ಮಲ್ಪೆ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಂದ ವಂಚನೆಗೊಳಗಾಗಿ ನೊಂದ ಸಂತ್ರಸ್ತರ ಸಭೆ ಅ. 13 ರಂದು ಭಾನುವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನೊಂದ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದ ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ ಮಾತನಾಡಿ
ಸಹಕಾರಿ ಬ್ಯಾಂಕ್ ನಿಂದ ನಿಮಗಾದ ಅನ್ಯಾಯ ಬಗ್ಗೆ ನಮಗೆ ನೋವುಂಟು ಮಾಡಿದೆ.
ಈ ರೀತಿಯಲ್ಲಿ ಅನ್ಯಾಯ ಮಾಡುವುದು ಯಾರಿಗೂ ಕೂಡ ಶೋಭೆ ತರುವಂತದ್ದಲ್ಲ. ನಿಮಗಾದ ಅನ್ಯಾಯದ ಬಗ್ಗೆ ಮೇಲ್ನೋಟಕ್ಕೆ ನನ್ನ ಗಮನದಲ್ಲಿ ಬಂದಿದೆ.
ಇದನ್ನು ಪರಿಗಣಿಸಿ ನಿಮಗೆ ಕಾನೂನು ಚೌಕಟ್ಟಿನಲ್ಲಿ ಖಂಡಿತವಾಗಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಸಂತ್ರಸ್ತರಾದ ನಿಮ್ಮೊಂದಿಗೆ ನಾವಿದ್ದೇವೆ ಎಂದು ಜಯಪ್ರಕಾಶ್ ಹೆಗ್ಡೆ ಆತ್ಮಧೈರ್ಯ ತುಂಬಿದರು.
ಜಿಲ್ಲಾ ಕಾಂಗ್ರೆಸ್ ಮುಂದಾಳು ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಉಡುಪಿ ಕ್ಷೇತ್ರದ ಜನತೆಗೆ ನಾನು ಸದಾ ನಿಮ್ಮ ಜೊತೆ ಇದ್ದೇನೆ, ನೀವು ಇಷ್ಟು ಹೊತ್ತು ನಿಮಗೆ ಅನ್ಯಾಯ ಆಗಿರುವುದರ ಕುರಿತು ಹೇಳಿದ ಪ್ರತಿಯೊಂದು ಮಾತನ್ನು ನಾನು ತಾಳ್ಮೆಯಿಂದ ಆಲೈಸಿದ್ದೇನೆ. ನಿಮ್ಮ ಪರಿಸ್ಥಿತಿ ನನಗೆ ಅರ್ಥ ಆಗಿದೆ ಇದರ ಬಗ್ಗೆ ನಿಮಗೆ ನ್ಯಾಯ ಕೊಡಿಸಲು ಕಾನೂನಿನ ಚೌಕಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಇಷ್ಟೊಂದು ಬಡ ಕುಟುಂಬಕ್ಕೆ ಅನ್ಯಾಯ ಮಾಡಿರುವವರ ವಿರುದ್ಧ ಸಹಕಾರಿ ಸಚಿವರು ಹಾಗೂ ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತಂದು ನಿಮಗೆ ನ್ಯಾಯ ಒದಗಿಸಲು ಖಂಡಿತವಾಗಿಯೂ ಪ್ರಯತ್ನ ಮಾಡುತ್ತೇನೆ ಎಂದು ಸಂತ್ರಸ್ತರ ಪರ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್, ಮನೋಜ್ ಕರ್ಕೇರ ಹಾಗೂ ಸಂತ್ರಸ್ತರು, ಉಪಸ್ಥಿತರಿದ್ದರು. ನೂರಾರು ಮಂದಿ ಸಂತ್ರಸ್ತರು ಸೇರಿ ಉನ್ನತ ಮಟ್ಟದ ತನಿಖೆಗಾಗಿ ಮನವಿ ಸಲ್ಲಿಸಿದರು.