ಡೈಲಿ ವಾರ್ತೆ: 13/OCT/2024
ಗದಗ: “ನೂತನ ಉಪನಿರ್ದೇಶಕರಿಗೆ ಸನ್ಮಾನ”
ಗದಗ ಜಿಲ್ಲೆಗೆ ನೂತನವಾಗಿ ಉಪನಿರ್ದೇಶಕರಾಗಿ
ಪದೋನ್ನತಿ ಪಡೆದ, ಕ್ರಿಯಾಶೀಲರು, ಉತ್ತಮ ಮಾರ್ಗದರ್ಶಕರು,ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ದಕ್ಷ ಆಡಳಿತಗಾರರಾದ ನೂತನ ಗದಗ ಜಿಲ್ಲೆಯ
ಉಪನಿರ್ದೇಶಕರಾದ ಮಾನ್ಯ ಆರ್ ಎಸ್
ಬುರಡಿ ಅವರಿಗೆ ಲಕ್ಷ್ಮೇಶ್ವರ ತಾಲೂಕಿನ ಬಸವರಾಜ ಎಮ್ ಕುಂಬಾರ ಗುರುಗಳು ಹಾಗೂ ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಮಾಡುವುದಾದರೆ ನನ್ನದೊಂದು ಆಶಯದಂತೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೂವಿನ ಮಾಲೆಯ ಬದಲಾಗಿ ನೋಟಬುಕ್ ಅಥವಾ ಲೇಖನಿ ಸಾಮಗ್ರಿಗಳನ್ನು ದೇಣಿಗೆ ನೀಡುವಂತೆ ಮನವಿ ಮಾಡಿದ್ದರು ಅದಕ್ಕೆ ಅನುಗುಣವಾಗಿ ಗುರುಬಳಗದ ವತಿಯಿಂದ ನೋಟಬುಕ್ಸ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಉಪನಿರ್ದೇಶಕರಾದ ಆರ್ ಎಸ್ ಬುರಡಿ ಅವರು ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಸವರಾಜ ಎಮ್ ಕುಂಬಾರ, ಡಿ ಎನ್ ದೊಡ್ಡಮನಿ,ಎಮ್ ಎನ್ ಭರಮಗೌಡ್ರ, ಎನ್ ಎಸ್ ಬಂಕಾಪೂರ, ಬಿ ಎಮ್ ಯರಗುಪ್ಪಿ, ಸತೀಶ ಬೋಮಲೆ, ಉಮೇಶ ನೇಕಾರ ಹಾಗೂ ಪ್ರವೀಣ್ ಉಳ್ಳಟ್ಟಿ ಹಾಜರಿದ್ದು, ಸನ್ಮಾನ ಮಾಡಿ ಶುಭ ಕೋರಲಾಯಿತು.