


ಡೈಲಿ ವಾರ್ತೆ: 16/OCT/2024


ವರದಿ: ಅಬ್ದುಲ್ ರಶೀದ್ ಮಣಿಪಾಲ
ಮಣಿಪಾಲ: ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯ ಸುರೇಶ್ ಅನಾರೋಗ್ಯ ದಿಂದ ನಿಧನ
ಮಣಿಪಾಲ: ಮಣಿಪಾಲ ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಸದಸ್ಯರಾದ ಸುರೇಶ್ ಅವರು ಅನಾರೋಗ್ಯದಿಂದ ಅ.16 ರಂದು ಬುಧವಾರ ಬೆಳಿಗ್ಗೆ ಮಣಿಪಾಲ ಕಸ್ತೂರುಬಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಮಣಿಪಾಲ ಶೇಷಾದ್ರಿ ನಗರದ ನಿವಾಸಿಯಾದ ಸುರೇಶ್ ಅವರು ಹಲವಾರು ವರ್ಷದಿಂದ ಮಣಿಪಾಲದ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯರಾಗಿ, ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿಶೇಷ ಕಾರ್ಯಕ್ರಮಗಳಲ್ಲಿ ಕೀಲು ಕುದುರೆಗಳಲ್ಲಿ ಹೆಸರುವಾಸಿಯಾಗಿದ್ದಾರೆ.
ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರಿಗೆ ಮಣಿಪಾಲ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.