

ಡೈಲಿ ವಾರ್ತೆ: 16/OCT/2024



ಕೋಟ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಪೋಕ್ಸೋ ಕಾಯಿದೆಯಡಿ ಆರೋಪಿಯ ಬಂಧನ
ಕೋಟ: ಕೋಟ ಬನ್ನಾಡಿ ಸಮೀಪದ ಹರೀಶ್ ಪೂಜಾರಿ ಎಂಬಾತ ಸಂಬಂಧಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಾಲಕಿ ಗರ್ಭಧರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಬನ್ನಾಡಿ ಹರೀಶ್ ಪೂಜಾರಿ ಎಂಬಾತನನ್ನು ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ.
ಘಟನೆ ವಿವರ: ಗ್ರಾನೈಟ್ ಕೆಲಸ ಮಾಡಿಕೊಂಡಿದ್ದ
ಆರೋಪಿ ಬನ್ನಾಡಿ ಹರೀಶ್ ಪೂಜಾರಿ ಉಡುಪಿ ಮೂಲದ 9ನೇ ತರಗತಿಯ ಸಂತ್ರಸ್ಥ ಬಾಲಕಿಯ ಸಂಬಂಧಿಯಾಗಿದ್ದು ಜುಲೈ 28 ರಂದು ಉಡುಪಿಯಲ್ಲಿರುವ ಬಾಲಕಿಯ ಮನೆಗೆ ಬಂದಿದ್ದು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಆರೋಪಿ, ಬಾಲಕಿಯನ್ನು ಪುಲಾಯಿಸಿ ಅತ್ಯಾಚಾರ ಎಸಗಿದ್ದಾನೆ.
ದಿನದಿಂದ ದಿನಕ್ಕೆ ಬಾಲಕಿಯ ಅರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಬಾಲಕಿ ಗರ್ಭವತಿಯಾದ ಘಟನೆ ಬೆಳಕಿಗೆ ಬಂದಿದೆ.
ಪೋಷಕರು ಉಡುಪಿ ಮಹಿಳಾ ಠಾಣೆಯಲ್ಲಿ ಆರೋಪಿ ಹರೀಶ್ ಪೂಜಾರಿ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.