ಡೈಲಿ ವಾರ್ತೆ: 16/OCT/2024
ಅ. 25, 26 ಹಾಗೂ 27 ರಂದು ಕುಂದ ಕನ್ನಡ ನಾಡಿನಲ್ಲಿ ಮೂರು ದಿನಗಳ ಕ್ರಿಕೆಟ್ ಹಬ್ಬ “ಕುಂದಾಪುರ ಟ್ರೋಫಿ-2024”
ಕುಂದಾಪುರ: ನ್ಯೂ ಸೆಲ್ ಡಾಟ್ ಕಾಮ್ (Newcell.com) ವತಿಯಿಂದ ಅ. 25 ರಿಂದ 27ರ ತನಕ ಕುಂದಾಪುರ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ “ಕುಂದಾಪುರ ಟ್ರೋಫಿ -2024” ನಡೆಯಲಿದೆ ಎಂದು ಕೆ.ಪಿ. ಸತೀಶ್ ಹೇಳಿದ್ದಾರೆ.
ಅವರು ಅ. 16 ರಂದು ಬುಧವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 16 ತಂಡಗಳ ಲೀಗ್ ಕಮ್ ನಾಕೌಟ್ ಬಿಡ್ಡಿಂಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು. ಪ್ರತಿ ತಂಡದಲ್ಲಿ ಕರ್ನಾಟಕದ 2 ಮಂದಿ ಐಕಾನ್ ಆಟಗಾರರಿಗೆ ಅವಕಾಶ ನೀಡಿದ್ದು. ಮಂಗಳೂರಿಂದ ಬೈಂದೂರು, ಶಿರೂರು ತನಕ ಆಟಗಾರರಿಗೆ ಬಿಡ್ಡಿಂಗ್ ಗೆ ಹೆಸರು ನೋಂದಾಯಿಸಲು ಅವಕಾಶ ಇರುತ್ತದೆ ಎಂದು ಹೇಳಿದರು.
ಅಲ್ಲದೆ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂಪಾಯಿ 1,01111 ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂಪಾಯಿ 50,555 ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು. ಮ್ಯಾನ್ ಆಫ್ ದಿ ಸೀರೀಸ್ ಗೆ ಗೋಲ್ಡ್ ರಿಂಗ್ ನೀಡಲಿದ್ದೇವೆ.
ಅಲ್ಲದೆ ಸೆಮಿಫೈನಲ್ ನಲ್ಲಿ ಸೋತ ತಂಡಗಳಿಗೆ ರೂ.10 ಸಾವಿರ ನಗದು ನೀಡಲಾಗುವುದು. ಅಲ್ಲದೆ ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬೌಲರ್ ಗೆ ಅತ್ಯುತ್ತಮ ಪ್ರಶಸ್ತಿ ನೀಡಲಾಗುವುದೆಂದು ಹೇಳಿದರು.
ಟೆನಿಸ್ ಬಾಲ್ ಆಟಗಾರ ರೌವೂಫ್ ಕೋಡಿ ಮಾತನಾಡಿ
ಇವತ್ತಿನ ದಿನಗಳಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಗಾಂಜಾ, ಅಫೀಮುಗಳಂತಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ.
ಅದಕ್ಕಾಗಿ ಇಂತಹ ಕ್ರಿಕೆಟ್ ಪಂದ್ಯಾಟಗಳನ್ನು ಅಥವಾ ಬೇರೆ ಬೇರೆ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವಕರು ದುಶ್ಚಟಗಳಿಗೆ ಬಲಿಯಾದಂತೆ ತಡೆಯಬಹುದು ಎಂಬ ಉದ್ದೇಶದಿಂದ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮುನಾಫ್ ಕೋಡಿ ಮಾತನಾಡಿ ಈ ಕ್ರಿಕೆಟ್ ಪಂದ್ಯಾಟದ
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್ ವಿತರಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಡ ಕುಟುಂಬಗಳಿಗೆ ರೇಷನ್ ಕಿಟ್ಟು ವಿತರಣೆ, ಬಡ ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ವೆಚ್ಚ ನೀಡಲಾಗುವುದೆಂದು ಮುನಾಫ್ ಕೋಡಿ ಹೇಳಿದರು.
ಈ ಸಂದರ್ಭದಲ್ಲಿ ಜಾನ್ಸನ್ ಕ್ರಿಕೆಟ್ ತಂಡದ ಮಾಲೀಕ ರವಿ, ಅಲ್ತಾಫ್ ಕೋಡಿ, ಶರತ್ ಕುಂಭಾಸಿ, ಪ್ರಶಾಂತ್ ಪ್ರಭು ಉಪಸ್ಥಿತರಿದ್ದರು.