ಡೈಲಿ ವಾರ್ತೆ: 17/OCT/2024
ಹಾವೇರಿ: ಬಾರಿ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿ ಬಾಲಕ ಮೃತ್ಯು!
ಹಾವೇರಿ: ಜಿಲ್ಲೆಯಾದ್ಯಂತ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕಾಣದೆ ಬಾಲಕನೋರ್ವ ಚರಂಡಿಗೆ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಹಾವೇರಿ ಎಸ್‌ಪಿ ಕಚೇರಿ ಮುಂಭಾಗದಲ್ಲಿ ನಡೆದಿದೆ.
ನೀವೆದನ್ ಬಸವರಾಜ್ ಗುಡಗೇರಿ (12) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಮಳೆ ಹೆಚ್ಚಾಗಿರೋ ಹಿನ್ನೆಲೆ ಬಾಲಕ ಬೆಳಗ್ಗೆ ರಸ್ತೆಯಲ್ಲಿ ನೀರನ್ನ ನೋಡುಲು ಹೋಗಿದ್ದ. ಈ ವೇಳೆ ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕ ಕೊಚ್ಚಿ ಹೋಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಶೋಧ ಕಾರ್ಯ ಆರಂಭಿಸಿದ್ರು. ಕಳೆದ ರಾತ್ರಿಯಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಸ್ತೆಗಳು ಕೆರೆಗಳಂತಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಮಗು ನೀರಿನಲ್ಲಿ ಕೊಚ್ಚಿಹೋದ ವಿಷಯ ತಿಳಿಯುತ್ತಿದ್ದಂತೆ ಬಾಲಕನ ತಾಯಿ ಅಸ್ವಸ್ಥರಾಗಿದ್ದು, ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮನೆಯಲ್ಲಿ ತೀವ್ರ ಆತಂಕ ವ್ಯಕ್ತವಾಗಿತ್ತು. ಪೋಷಕರು ಬಾಲಕ ಬದುಕಲೆಂದು ಸಾಕಷ್ಟು ಪ್ರಾರ್ಥನೆ ಮಾಡಿದ್ರು ವಿಧಿಯಾಟ ನವೇದನ್ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಇಂದು ಬೆಳಿಗ್ಗೆ ಬಾಲಕ ಪತ್ತೆಯಾಗುತ್ತಿದ್ದಂತೆ ಕಣ್ಣು ಮಿಟುಕಿಸಿದ್ದಾನೆ ಎನ್ನುವ ಮಾಹಿತಿ ಮೆರೆಗೆ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ರು ನಿವೇದನ್ ಬದುಕುಳಿಯಲಿಲ್ಲ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.