ಡೈಲಿ ವಾರ್ತೆ: 17/OCT/2024
ಕೋಟ: ವರುಣತೀರ್ಥ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಪ್ರಕಾಶ್ ತೋಳಾರ್ ಆಯ್ಕೆ
ಕೋಟ: ಬ್ರಹ್ಮಾವರ ತಾಲೂಕಿನ ಕೋಟ ವರುಣತೀರ್ಥ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 3 ರಂದು ನಡೆಯುವ “ನಿರಂತರ” ಕಾರ್ಯಕ್ರಮದಲ್ಲಿ ವರುಣತೀರ್ಥ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಖ್ಯಾತ ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್ ಭಾಜನರಾಗಿದ್ದಾರೆ ಎಂದು ವರುಣತೀರ್ಥ ವೇದಿಕೆ ಅಧ್ಯಕ್ಷ ಉದಯ ದೇವಾಡಿಗ ತಿಳಿಸಿದ್ದಾರೆ.
ಅವರು ಅ. 17 ರಂದು ಗುರುವಾರ ಕೋಟ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ನಡೆದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ
ವರುಣತೀರ್ಥ ವಠಾರದಲ್ಲಿ
ನವಂಬರ್ 1 ರಂದು ಬೆಳಿಗ್ಗೆ 9.00 ಗಂಟೆಗೆ ಧ್ವಜಾರೋಹಣ
9.30 ಕ್ಕೆ ಬೈಕ್ ರ್‍ಯಾಲಿ ನಡೆಯಲಿದೆ.
ದಿನಾಂಕ 03/11/2024 ರಂದು ಆದಿತ್ಯವಾರ ಸಂಜೆ 5:30 ರಿಂದ ಪುಟಾಣಿ ವೈವಿಧ್ಯ ಕಾರ್ಯಕ್ರಮ
ಸಂಜೆ 7 ಕ್ಕೆ ಸಂಗೀತ ಸಂಜೆ
ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಖ್ಯಾತ ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್ ಅವರಿಗೆ ವರುಣತೀರ್ಥ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಲ್ಲದೆ ಮುಳುಗು ತಜ್ಞ ಸಮಾಜ ಸೇವಕ ಈಶ್ವರ್ ಮಲ್ಪೆಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9 ಕ್ಕೆ ಸನ್ನಿಧಿ ಕಲಾವಿದರಿಂದ ಮಂತ್ರ ದೇವತೆ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ ಕುಂದರ್, ಸಮಿತಿ ಸದಸ್ಯರಾದ ಶಿವ ಪೂಜಾರಿ ಮಣೂರು, ಉಮೇಶ್ ಪೂಜಾರಿ, ಗಣೇಶ್ ಭಂಡಾರಿ, ಸುರೇಶ್ ಕದ್ರಿಕಟ್ಟು, ಜಗನಾಥ್ ಕಾಂಚನ್, ಶೀಲಾರಾಜ್ ಕಾಂಚನ್, ನರಸಿಂಹ ಕದ್ರಿಕಟ್ಟು, ಗಣೇಶ್ ಕುಂದರ್, ಗಿರೀಶ್ ದೇವಾಡಿಗ, ಜೀವನ್ ಪೂಜಾರಿ, ಸುಧಾಕರ್ ಪೂಜಾರಿ ಮೊದಲದವರು ಉಪಸ್ಥಿತರಿದ್ದರು.