ಡೈಲಿ ವಾರ್ತೆ: 19/OCT/2024

ಸಾಲಿಗ್ರಾಮ: ವಿವೇಕ್ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ವತಿಯಿಂದ ಶ್ರೀಮಹರ್ಷಿ ವಾಲ್ಮೀಕಿ ದಿನಾಚರಣೆ

ಕೋಟ: ವಿವೇಕ್ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ಸಾಲಿಗ್ರಾಮ ಇವರ ವತಿಯಿಂದ ಇಂದಿರಾ ಭವನ ಸಾಲಿಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ದಿನಾಚರಣೆಯನ್ನು ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸಬಿತಾ ಗುಂಡ್ಮಿ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಬಾರ್ಕೂರು ಹಾಗೂ ಶ್ರೀಮತಿ ಸುಶೀಲನಾಡ, ಸಂಸ್ಥೆಯ ಅಧ್ಯಕ್ಷರಾದ ಸಂಜಯ್ ಸಾಲಿಗ್ರಾಮ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಸಬಿತಾ ಗುಂಡ್ಮಿ ಯವರನ್ನು ಸನ್ಮಾನಿಸಲಾಯಿತು. ಸಮುದಾಯದ ಮಹಿಳಾ ಮತ್ತು ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.