ಡೈಲಿ ವಾರ್ತೆ: 19/OCT/2024

ಗುಂಡ್ಲುಪೇಟೆ: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

ಗುಂಡ್ಲುಪೇಟೆ: ಬೈಕ್ ಸವಾರನ ಮೇಲೆ ಕಾಡಾನೆಯೊಂದು ದಾಳಿಗೆ ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಸವಾರ ಪಾರಾದ ಘಟನೆ ತಾಲೂಕಿನ ಬಂಡೀಪುರ ಹೆದ್ದಾರಿ ರಸ್ತೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ‌.

ಬೈಕ್ ಸವಾರ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ಕಡೆಯಿಂದ ಮೈಸೂರಿನ ಕಡೆಗೆ ಬರುವಾಗ ರಸ್ತೆಯ ಬದಿಯಲ್ಲಿ ಆನೆಗಳು ನಿಂತಿರುವುದನ್ನು ಗಮನಿಸದೆ ಚಾಲನೆ ಮಾಡಿಕೊಂಡು ಬಂದಿದ್ದಾನೆ.
ಈ ವೇಳೆ ಆನೆ ಬೈಕ್ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಗಾಬರಿಗೊಂಡ ಸವಾರ ರಸ್ತೆಯಲ್ಲೇ ಬೈಕ್ ಬಿಟ್ಟು ತಪ್ಪಿಸಿಕೊಳ್ಳುವ ಭರದಲ್ಲಿ ಇನ್ನೆರಡು ಆನೆಗಳು ನಿಂತಿರುವ ಕಡೆ ಓಡಿ ಹೋಗಿದ್ದಾರೆ. ತದ ನಂತರ ಆನೆ ಮತ್ತು ಮರಿ ಮೊದಲಿಗೆ ದಾಳಿ ಮಾಡಲು ಬಂದ ಆನೆಯೊಂದಿಗೆ ಕಾಡಿನೊಳಗೆ ಹೋಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ‌.