ಡೈಲಿ ವಾರ್ತೆ: 21/OCT/2024

ಮಾನವೀಯತೆ ಮೆರೆದ ಯುವ ಚಿತ್ರಕಲಾವಿದೆ -ಪ್ರಜ್ಞಾ.ಜಿ ಪೂಜಾರಿ ಹಂದಟ್ಟು

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಹಂದಟ್ಟು ಪರಿಸರದ ಈ ಪುಟ್ಟ ಪೋರೆ ಮಾನವೀಯ ಗುಣಗಳು ಇತರಿಗೆ ಮಾದರಿಯಾಗಿದೆ
ಕೋಟತಟ್ಟು ಹಂದಟ್ಟು ಪ್ರಜ್ಞಾ ಗೀತಾ ಪೂಜಾರಿ ತನ್ನ ಕೈಚಳಕದಲ್ಲಿ ಸಾಕಷ್ಟು ಚಿತ್ರಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸುತ್ತಿದ್ದಾಳೆ.

ಇದರ ಆದಾಯದಿಂದ ಬಂದ ಹಣವನ್ನು ಕ್ಯಾನ್ಸರ್ ಪೀಡಿತರಿಗೆ ನೆರವಿನ ಹಸ್ತ ಚಾಚಿ ಮಾದರಿಯಾಗಿದ್ದಾರೆ
ಪ್ರಸ್ತುತ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಎಂ.ಎಸ್.ಸಿ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಈಕೆ ಪ್ರಸ್ತುತ ಸಾಕಷ್ಟು ಸಲೆಬ್ರೇಟಿಗಳ ಚಿತ್ರ ರಚಿಸಿ ಕಲಾ ರಸಿಕರ ಮನಗೆದ್ದಿದ್ದಾರೆ, ಇವರ ಚಿತ್ರ ಕಲಾಕೈಕಂರ್ಯಕ್ಕೆ ಚಿತ್ರ ರಂಗದ ಶ್ರೇಷ್ಠ ಹಾಸ್ಯನಟ ದೊಡ್ಡಣ್ಣ ಫೀದಾ ಹೇಳಿದ್ದಾರೆ.
ಭರತನಾಟ್ಯ ಪಟುವಾಗಿ ರಂಗೋಲಿ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡ ಪ್ರಜ್ಞಾ ಹಂದಟ್ಟು ತಾನು ರಚಿಸಿದ ಚಿತ್ರಗಳ ಮೂಲಕ ಗಳಿಸಿದ ಆದಾಯದಿಂದ ಕೋಟತಟ್ಟು ಬಾರಿಕೆರೆಯ ಕ್ಯಾನ್ಸರ್ ಪೀಡಿತ ಕೃತಿಕ್ ಗಾಣಿಗ ಇವರಿಗೆ ನೀಡಿ ಹೊಸ ಸಂದೇಶ ನೀಡಿದ್ದಾರೆ.
ತನ್ನ ಚಿಕ್ಕ ವಯಸ್ಸಿನಲ್ಲೆ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು ಎಲ್ಲಾ ಯುವಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ಭಾನುವಾರ ಅವರ ಮನೆಗೆ ತನ್ನ ತಾಯಿ ಗೀತಾರೊಂದಿಗೆ ತೆರಳಿ ಸುಮಾರು 10 ಸಾವಿರ ರೂಗಳನ್ನು ನೀಡಿ ಅನಾರೋಗ್ಯ ಪೀಡಿತರಿಗೆ ಮಿಡಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ
ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃತಿಕ್ ಈತನಿಗೆ ಆರ್ಥಿಕ ಸಹಾಯದ ಅವಶ್ಯಕತೆ ಇದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಕ್ಷೀಸಿದ್ದು ಇದನ್ನು ಮನಗಂಡ ಪ್ರಜ್ಞಾ ತಾನು ಚಿತ್ರ ರಚಿಸಿ ಒಟ್ಟುಗೂಡಿಸಿದ ಹಣವನ್ನು ಇಂತಹ ಅಶಕ್ತರಿಗೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ.
ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಕೂಡಾ ಜಾಲತಾಣಗಳಗಲ್ಲಿ ವ್ಯಕ್ತವಾಗಿದೆ.

ಇಂಥಹ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಹುಟ್ಟಬೇಕು ಆಗಮಾತ್ರ ನಮ್ಮಂತ ಅದೆಷ್ಟೊ ಕುಟುಂಬಗಳ ಅನಾರೋಗ್ಯ ಪೀಡಿತರಿಗೆ ಆಶ್ರಯವಾಗುವುದಲ್ಲಿ ಅನುಮಾನವೇ ಇಲ್ಲ ಪ್ರಜ್ಞಾ ಎನ್ನುವ ಚಿತ್ರಕಲಾವಿದೆಗೆ ದೇವರು ಒಳ್ಳೆಯದನ್ನೆ ಮಾಡಲಿ ಎಂದು ಹಾರೈಸುತ್ತೇನೆ

ಕೃತಿಕ್ (ಅಜ್ಜ ) ರಾಮ ಗಾಣಿಗ ಕೋಟತಟ್ಟು ಬಾರಿಕೆರೆ
ನನ್ನ ಮಗಳಿಗೆ ಹೀಗೊಂದು ಚಿಂತನೆ ಪಸರಿಸಿದ್ದು ನನ್ನಗೆ ತುಂಬಾ ಹೆಮ್ಮೆ ಎನಿಸುತ್ತಿದೆ.
ಈ ರೀತಿಯ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂಬ ಹರಕೆ ಹಾರೈಕೆ ನನ್ನದು.
ಗೀತಾ ಪೂಜಾರಿ ಹಂದಟ್ಟು ಕೋಟ