ಡೈಲಿ ವಾರ್ತೆ: 23/OCT/2024

ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ನಿರ್ವಹಣೆ ಅತ್ಯಗತ್ಯ: ಪ್ರೊಫೆಸರ್. ಪುಟ್ಟಣ್ಣ

ಮಂಗಳೂರು: ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಶಿಸ್ತು ಮತ್ತು ಸಮಯ ನಿರ್ವಹಣೆ ಕಲೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ಸರಿಯಾದ ದಿಶೆಯಲ್ಲಿ ಸಾಗುವತ್ತ ಪ್ರೇರೆಪಿಸುತ್ತದೆ. ವಿದ್ಯಾರ್ಥಿಗಳು ಕಲಿಕೆ, ಸಾಮಾನ್ಯ ಜ್ಞಾನ ಮತ್ತು ಸಂಪನ್ಮೂಲಗಳ ಸರಿಯಾದ ಬಳಕೆಯಿಂದ ತಾವು ಉನ್ನತ ಉದ್ಯೋಗವಕಾಶ ಪಡೆಯುವುದರೊಂದಿಗೆ ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಪ್ರೊಫೆಸರ್. ಪುಟ್ಟಣ್ಣ ಕೆ. ನುಡಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವು ಆಯೋಜಿಸಿರುವ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಾಣಿಜ್ಯ ವಿಭಾಗದ ಪ್ರೊಫೆಸರ್. ವೈ. ಮುನಿರಾಜು, ಪ್ರೊಫೆಸರ್. ಈಶ್ವರ ಪಿ, ಪ್ರೊಫೆಸರ್. ವೇದವ ಪಿ, ಪ್ರೊಫೆಸರ್. ಪರಮೇಶ್ವರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮಾರ್ಗದರ್ಶನ ಮತ್ತು ಸಂದೇಶವನ್ನು ನೀಡಿದರು.

ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು. ವಾಣಿಜ್ಯ ವಿಭಾಗದ ಸ್ಟಾಫ್ ಕೋ ಆರ್ಡಿನೇಟರಸ್ ಗುರುರಾಜ್ ಪಿ. ಸ್ವಾಗತಿಸಿ, ವೈಶಾಲಿ ಕೆ. ವಂದಿಸಿದರು. ವಿದ್ಯಾರ್ಥಿಗಳಾದ ಕವಿತಾ, ಕೃತಿ ಮತ್ತು ಧನ್ಯಶ್ರೀ ಪ್ರಾರ್ಥಿಸಿದರು. ನಿರ್ಮಲ ಬಿ. ಕಾರ್ಯಕ್ರಮ ನಿರೂಪಣೆಗೈದರು.