ಡೈಲಿ ವಾರ್ತೆ: 05/NOV/2024

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ, ವಲಯ-II, ಪ್ರಾಂತ್ಯ-V, ಲಯನ್ಸ್ ಜಿಲ್ಲೆ 317 ಸಿ. ವತಿಯಿಂದ ಆರ್ಥಿಕ ಅಶಕ್ತ ವಿಜಯ ಬಾಲ ನಿಕೇತನ ವಿದ್ಯಾರ್ಥಿ ನಿಲಯದ ‘ಹಾಸ್ಟೆಲ್ ಕಟ್ಟಡ ನಿರ್ಮಾಣ’ ಕ್ಕೆ ರೂ. 50,000.00 ಧನ ಸಹಾಯ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಒಂದು ಹೊತ್ತಿನ ಊಟ

ದಿನಾಂಕ 03-11-2024 ನೇ ಆದಿತ್ಯವಾರ ವಿಜಯ ಬಾಲ ನಿಕೇತನ ಮಟಪಾಡಿ ಇಲ್ಲಿಯ ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಹೋಗಿ 100 ವಿದ್ಯಾರ್ಥಿಗಳಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಿ ಅಲ್ಲಿಯ ಆಡಳಿತ ಮಂಡಳಿಯವರಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆಯ ರೂ. 50,000.00 ಮೊತ್ತದ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ಸದ್ರಿ ದೇಣಿಗೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆಯವರು ನೀಡಿದ್ದು, ವಿಜಯ ಬಾಲ ನಿಕೇತನದ ಟ್ರಸ್ಟ್ ಆದ ‘ವಿಜಯ ಸೇವಾ ಪ್ರತಿಷ್ಠಾನ (ರಿ.), ಇದರ ಸದಸ್ಯರಾದ ಮಟಪಾಡಿ ವಿಶ್ವನಾಥ ಶೆಟ್ಟಿ, ಮಟಪಾಡಿ ಜಯರಾಮ ನಾಯರಿ ಇವರು ಅದನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ ಹೆಗ್ಡೆ ವಹಿಸಿದ್ದರು.

ಲಯನ್ಸ್ ರೀಜನ್ ಚಯರ್ ಪರ್ಸನ್ ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ, ಲಯನ್ ಕಲ್ಕಟ್ಟೆ ಚಂದ್ರ ಶೇಖರ ಶೆಟ್ಟಿ, ಲಯನ್ ಎಮ್.ಜೆ.ಎಫ್ ಅಚ್ಲಾಡಿ ವಸಂತ ಶೆಟ್ಟಿ ಸೂರಿಬೆಟ್ಟು,
ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ,
ಲಯನ್ ಅಚ್ಲಾಡಿ ಸುಧಾಕರ ಶೆಟ್ಟಿ, ಲಯನ್ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ,
ಲಯನ್ ಬಿ.ಬಿ.ಜೀವನ್ ಹೆಗ್ಡೆ,
ಲಯನ್ ಕಾವಡಿ ಉಲ್ಲಾಸ್ ಶೆಟ್ಟಿ, ಲಯನ್ ಅಚ್ಲಾಡಿ ಸುರೇಂದ್ರ ಶೆಟ್ಟಿ ಕೊಮೆ,
ಹಾಗೂ ವಿಜಯ ಬಾಲನಿಕೇತನದ ವಿದ್ಯಾರ್ಥಿಗಳು ಮತ್ತು ಸಿಬ್ಭಂದಿ ವರ್ಗದವರು ಸೇವಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.