


ಡೈಲಿ ವಾರ್ತೆ: 07/NOV/2024


ಉಡುಪಿ: ಬೈಲಕೆರೆ ತೋಡಿನಲ್ಲಿ ಅಪರಿಚಿತ ಕೊಳೆತ ಶವಪತ್ತೆ
ಉಡುಪಿ: ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಣಿ ತೋಡಿನಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ಗುರುವಾರ ಪತ್ತೆ ಆಗಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಸ್ಥಳೀಯರವರಾದ ಸುನಿಲ್ ಬೈಲಕೆರೆ ಅವರು ಕರೆ ಮಾಡಿ ತಿಳಿಸಿದರು, ತಕ್ಷಣ ಒಳಕಾಡು ಬಂದು ತೋಡಿನಲ್ಲಿ ಬಿದ್ದಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಲಾಯಿತು ನಗರ ಠಾಣೆಯ ಎಎಸ್ಐ ನವೀನ್ ದೇವಾಡಿಗ, ಹೆಡ್ ಕಾನ್ಸಟೇಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದರು.
ಉಮೇಶ ಬೈಲಕೆರೆ ಸಹಕರಿಸಿದರು ಶವಾಗರಕ್ಕೆ ಕೊಂಡು ಹೋಗಲು ಒಳಕಾಡು ಸಹಕರಿಸಿದರು. ಸಮ್ಮಂದಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.