ಡೈಲಿ ವಾರ್ತೆ: 07/NOV/2024
ವಕ್ಪ್ ಬೋರ್ಡ್ ವಿರುದ್ಧ ಬಿಜೆಪಿ ಶಾಸಕ ಜಿಲ್ಲಾಧಿಕಾರಿಗೆ ಮನವಿ ಕೊಡುವ ವರ್ತನೆಯು ಗುಂಡಾಗಿರಿ ವರ್ತನೆಯಾಗಿದೆ – ನಾಗೇಂದ್ರ ಪುತ್ರನ್
ಉಡುಪಿ: ವಕ್ಪ್ ಮಂಡಳಿ ವಿರುದ್ಧ ನ. 6 ರಂದು ಬಿಜೆಪಿಯ ಉಡುಪಿ ಶಾಸಕ ಹಾಗೂ ಕಾರ್ಯಕರ್ತರು ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲು ಹೋದ ವರ್ತನೆಯು ಗುಂಡಾಗಿರಿ ಮಾಡುವ ವರ್ತನೆಯಾಗಿ ಕಾಣುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಹೇಳಿದ್ದಾರೆ.
“ನಕಲಿ ಹಿಂದೂಗಳ ಸೊಂಟ ಮುರಿಬೇಕಂತೆ”
ಒಬ್ಬ ಶಾಸಕ ಸ್ಥಾನದಲ್ಲಿದ್ದ ಯಶ್ಪಾಲ್ ಸುವರ್ಣ ರವರು
ಉಡುಪಿಯಲ್ಲಿರುವ ಒಂದು ಬ್ಯಾಂಕ್ ನ ಅಧ್ಯಕ್ಷರಾಗಿದ್ದು ನೂರಾರು ಹಿಂದೂಗಳಿಗೆ ಅನ್ಯಾಯ ಆಗಿದ್ದರೂ ತುಟಿ ಬಿಚ್ಚಿ ಮಾತಾನಾಡದ ಇವರು ಇವತ್ತಿನ ಪ್ರತಿಭಟನೆಯಲ್ಲಿ
ಹಿಂದೂಗಳ ಪರ ಹೋರಾಟ, ಹಿಂದೂ ಸಂಸ್ಕೃತಿ, ಸಂವಿಧಾನ, ಅಂತ ಕೂಗಾಟ ಮಾಡುವುದಲ್ಲದೆ ನಕಲಿ ಹಿಂದೂಗಳ ಸೊಂಟ ಮುರಿಬೇಕಂದು ಎಂದು ಹೇಳಿಕೆ ನೀಡುವ ಈ ಶಾಸಕನಿಗೆ ಆ ನೈತಿಕತೆ ಇದೆಯೇ.?
ಇದನ್ನೆಲ್ಲ ನೋಡಿ ಜನರೇ ತೀರ್ಮಾನ ಮಾಡಬೇಕು ನೈಜ ಹಿಂದೂ ಯಾರೆಂದು.
ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ರಂಪಾಟ, ಕೂಗಾಟ ಮಾಡಿ ನಮ್ಮ ನಿಷ್ಠಾವಂತ ಪೊಲೀಸರನ್ನು ತಳ್ಳಿ ಜಿಲ್ಲಾಧಿಕಾರಿ ಅವರಿಗೆ ಮನವಿ ಕೊಡುವ ಪರಿಸ್ಥಿತಿ ಏನಾದರೂ ಇದೆಯೇ.? ಇದು ನಿಜಕ್ಕೂ ಗಲಭೆ ಸೃಷ್ಟಿಸಿ ಜಿಲ್ಲೆಯ ಶಾಂತಿ ಕದಡುವ ಹುನ್ನಾರವಾಗಿದೆ.
ನಿಜವಾದ ಹಿಂದೂಗಳು ಈ ರೀತಿ ವರ್ತನೆ ಮಾಡುವುದಿಲ್ಲ, ಇವರೊಬ್ಬ ದೊಡ್ಡ ನಕಲಿ ಹಿಂದೂ, ಹಿಂದೂಗಳನ್ನು ರಾಜಕೀಯ ದಾಳವಾಗಿ ಮಾಡಿಕೊಳ್ಳುವ ದುರುದ್ದೇಶವಾಗಿದೆ.
ನಮ್ಮ ಜಿಲ್ಲೆ ಬುದ್ದಿವಂತರ ಜಿಲ್ಲೆ, ಹಿಂದೂಗಳು ಪ್ರಜ್ಞಾವಂತರಾಗಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗದ ಉಪಾಧ್ಯಕ್ಷರು ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.