ಡೈಲಿ ವಾರ್ತೆ: 10/NOV/2024

ಆಣೆ ಪ್ರಮಾಣಕ್ಕೆ ಕರೆದು ಪೂಜೆ ಸಲ್ಲಿಸಿ ಓಡಿಹೋದ ಮಹಾಲಕ್ಷ್ಮಿ ಬ್ಯಾಂಕ್ ಎಂ.ಡಿ ಹಾಗೂ ಸಿಬ್ಬಂದಿಗಳು – ನಾಗೇಂದ್ರ ಪುತ್ರನ್ ಆರೋಪ

ಉಡುಪಿ: ದೇವಸ್ಥಾನದ ಒಳಗೆ ಬಾರದೆ ಹೊರಗಿಂದ ಹೊರಗೆ ಹಾರಿ ಹೋದ ಹಾರಿಕಾ ಮೇಡಂ ಮತ್ತು ಆಗಿನ ಸಾಲ ನೀಡುವಾಗ ಇದ್ದ ಸಿಬ್ಬಂದಿಗಳು.

ಈಗ ಯಶ್ಪಾಲ್ ಸುವರ್ಣ ಹೇಳಿಕೆ ನೀಡುವಾಗ ರಘುಪತಿ ಭಟ್ ಅವರೇ ಆಣೆ ಪ್ರಮಾಣಕ್ಕೆ ಬರಲು ಹೇಳಿದ್ದು ಅಂತ ಸುಳ್ಳು ಹೇಳಿಕೆ ನೀಡಿದ್ದಾರೆ, ಮಹಾಲಕ್ಷ್ಮಿ ಬ್ಯಾಂಕಿನ ಎಂ.ಡಿ ಶರತ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಆಣೆ ಪ್ರಮಾಣಕ್ಕೆ ಕರೆದ ಪತ್ರ ನಮ್ಮಲ್ಲಿದೆ.
ಇವರ ಈ ಹೇಳಿಕೆಗಳಿಂದ ನಮಗೆ ಅರ್ಥವಾಗುತ್ತದೆ ಇವರು ಸತ್ಯದ ದಾರಿಯಲ್ಲಿ ಹೋಗುವವರು ಅಲ್ಲ ಎಂದು.

ಈಗ ಯಾವುದೋ ಒಂದು ಸಣ್ಣ ವಿಷಯ ಹಿಡಿದುಕೊಂಡು ಕೋಮ ದ್ವೇಷ ಹರಡಲು ಪ್ರಯತ್ನ ಪಡುತ್ತಿದ್ದಾರೆ.
ಇವರ ಜೀವನ ಪೂರ್ತಿ ಜನರ ಜೀವನದಲ್ಲಿ ಆಟವಾಡಿ ಅಭ್ಯಾಸವಾಗಿ ಬಿಟ್ಟಿದೆ, ಏನು ತಿಳಿಯದ ಒಂದು ಮಗುವಿನ ಕಾಲಿನ ಶೂ ಬಗ್ಗೆ ಮಾತನಾಡುವ ಇವರು ಮುಸ್ಲಿಂ ಬಾಂಧವರನ್ನು ಬಿಟ್ಟು 70 ರಿಂದ 80 ಮಂದಿ ಹಿಂದುಗಳು ಇದ್ದಾರೆ ಅವರಿಗೂ ಈ ಬ್ಯಾಂಕಿನಿಂದ ಅನ್ಯಾಯವಾಗಿದೆ ಅದರ ಬಗ್ಗೆ ಮಾತನಾಡವ ಯೋಗ್ಯತೆ ಇಲ್ಲವೇ.

ಯಶ್ಪಾಲ್ ಸುವರ್ಣ ಬರಿ ಬಾಯಿ ತೆಗೆದರೆ ಸಾಕು ಹಿಂದೂ,ಮುಸ್ಲಿಂ ಎಂದು ಹೇಳಿಕೊಂಡು ತಿರುಗುವುದು, ದೇಶದಲ್ಲಿ ಗೋಮಾಂಸ ರಫ್ತುನಲಿ ದೇಶ ಎರಡನೇ ಸ್ಥಾನದಲ್ಲಿದೆ. ಯಶ್ಪಾಲ್ ಸುವರ್ಣ ತಾಕತ್ತಿದ್ದರೆ ಅದನ್ನು ನಿಲ್ಲಿಸಲಿ. ಇದನ್ನೆಲ್ಲಾ ಬಿಟ್ಟು ಸುಖಸುಮ್ಮನೆ ಗಲಭೆ ಎಬ್ಬಿಸುವ ಹುನ್ನಾರ ಮಾಡುತ್ತ ಇದ್ದಾರೆ.
ಯಶ್ಪಾಲ್ ಸುವರ್ಣಗೆ ವ್ಯವಹಾರದ ಪಾರ್ಟ್ನರ್ ಶಿಪ್ಗೆ ಅನ್ಯ ಧರ್ಮ ಬೇಕು
ಇವರ ಈ ರೀತಿ ವರ್ತನೆ ಮಾಡಲು ಇದು ಯಶ್ಪಾಲ್ ಸುವರ್ಣ ಅವರ ಮನೆಯ ಬ್ಯಾಂಕ್ ಅಲ್ಲ. ಇಲ್ಲಿಎಲ್ಲಾ ಜಾತಿ, ಧರ್ಮದವರು ವ್ಯವಹಾರದ ನಡೆಸುತ್ತಾರೆ, ಅಂತಹದರಲ್ಲಿ ಬೇರೆ ಜಾತಿಯನ್ನು ನಿಂದಿಸುವ ಬ್ಯಾಂಕ್ ಅಧ್ಯಕ್ಷರು ಒಂದು ಕ್ಷಣ ಕೂಡ ಅಧ್ಯಕ್ಷ ಕುರ್ಚಿಯ ಮೇಲೆ ಕುಳಿತು ಕೊಳ್ಳುವ ಅರ್ಹತೆ ಇಲ್ಲ ಎಂದು ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಬೇರೆಬೇರೆ ಜಾತಿ ಅವರು ಕೂಡ ನಮ್ಮ ಹಿರಿಯರು ಕಟ್ಟಿದ ಬ್ಯಾಂಕ್ ನಲ್ಲಿ FD ಮಾಡಿ ಇಟ್ಟಿರುದ ಯಶ್ಪಾಲ್ ಅವರ ಗಮನಕ್ಕೆ ಬಾರದೆ ಇರುದು ದೊಡ್ಡ ದುರಂತ.

ಈಗ ಯಶ್ಪಾಲ್ ಸುವರ್ಣ ಅವರು ರಘುಪತಿ ಭಟ್ ಅವರನ್ನು ಜಾತಿ ವಿಷೆಯದಲ್ಲಿ ಎತ್ತಿ ಕಟ್ಟಿ ರಘುಪತಿ ಭಟ್ ಅವರ ತೇಜೋವದೆ ಮಾಡಲು ಹೊರಟಿರುವುದು ಯಶ್ಪಾಲ್ & ಟೀಮ್ ವ್ಯವಸ್ಥಿತ ಸಂಚು ಎಂದು ತಿಳಿಯುತ್ತದೆ.

ಜನರಿಗೆ ಅನ್ಯಾಯ ಮಾಡಿ ಗೌರವ ಯುತವಾಗಿ ಬದುಕಲು ಸಾಧ್ಯವಾಗದವರ ಕೊನೆಯ ಅಸ್ತ್ರ ಅಪಪ್ರಚಾರ ಮಾಡುವುದು.

ಪ್ರಸಾದ್ ಕಾಂಚನ್ ತಂದೆಯಿಂದ ತನಿಖೆ ಆರಂಭಿಸಿ ಎಂದು ಹೇಳುವ ಅಧ್ಯಕ್ಷರು ಜನತೆ ಕೊಟ್ಟಿರುವ ಇವರ ಅನ್ಯಾಯದ ಕೇಸು ಗಳಿಗೆ ತಡೆ ತರುದು ಯಾಕೆ? ಎಲ್ಲಾ ಆಯಮದ ತನಿಖೆಗೆ ಸಿದ್ದ ಎಂದು ಹೇಳುವ ಅಧ್ಯಕ್ಷರು ತನಿಖೆಗೆ ತಡೆ ತರುವುದು ಯಾಕೆ?

ಅಧ್ಯಕ್ಷರು ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ ಅವರು ತನಿಖೆಗೆ ಸಹಕರಿಸಲಿ, ನಾವು ತನಿಖೆಯಾಗಿ ಸಿದ್ದರಿದ್ದೇವೆ ಅಲ್ಲದೆ ನಾವು ಜಯ ಗಳಿಸುತ್ತೇವೆ ಎನ್ನುವ ನಂಬಿಕೆ ನಮಗೆ ಇದೆ, ನಮ್ಮಲ್ಲಿ ಇರುವ ಹಲವಾರು ದಾಖಲೆ ತನಿಖಾಧಿಕಾರಿಯವರಿಗೆ ಕೊಡುತ್ತೇವೆ, ಉನ್ನತ ಮಟ್ಟದ ತನಿಖೆ ಯಾಗಲಿ, ಪ್ರತಿಯೊಂದು ತನಿಖೆ ಆಗಲಿ, ತಮಿಳುನಾಡಿನ ಉಳಂದೂರಿ ನಿಂದ ಉಡುಪಿ ಮಲ್ಪೆ ವರೆಗೂ ತನಿಖೆ ಆಗಲಿ, ಶಾಸಕರು ತನಿಖೆಗೆ ಸಹಕರಿಸಲಿ ಎಂದು ಉಡುಪಿ ಜಿಲ್ಲಾ ಸಮಿತಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿಕೆ ನೀಡಿದ್ದಾರೆ.