ಡೈಲಿ ವಾರ್ತೆ: 15/NOV/2024

ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಅವ್ಯವಹಾರದ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಗ್ರಾಹಕರು ದೂರು ದಾಖಲು

ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಅವ್ಯವಹಾರವಾಗಿದೆ, ಠೇವಣಿದಾರರ ಹಣ ದುರುಪಯೋಗವಾಗಿದೆ ಎಂಬ ವ್ಯಾಪಕ ಸುದ್ದಿ ಹರಿದಾಡುತ್ತಿದ್ದಂತೆಯೇ ಬ್ಯಾಂಕಿಗೆ ಸಂಬಂಧಿಸಿದವರು ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. ಬ್ಯಾಂಕ್ ವ್ಯವಹಾರ ಸುಸ್ಥಿತಿಯಲ್ಲಿದೆ, ಗ್ರಾಹಕರಿಗೆ ಮೋಸವಾಗದು ಎಂಬ ಹೇಳಿಕೆಗಳು ಹೊರಬೀಳತೊಡಗಿವೆ. ಇದರ ನಡುವೆ ಈ ಗಂಭೀರ ವಿಷಯದಲ್ಲಿ ರಾಜಕೀಯವೂ ಮಿಳಿತವಾಗಿ ಆರೋಪ, ಪ್ರತ್ಯಾರೋಪಗಳೂ, ಸ್ಪಷ್ಟಿಕರಣಗಳೂ ಚಾಲನೆಗೊಂಡಿವೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಸಮಿತಿಯ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಈ ಬಗ್ಗೆ ಒಂದು ಪ್ರಕಟಣೆ ಹೊರಡಿಸಿ, ಬ್ಯಾಂಕ್ ಅವ್ಯವಹಾರದ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಗ್ರಾಹಕರು ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಪುತ್ರನ್ ಬಿಡುಗಡೆ ಮಾಡಿದ ಪ್ರಕಟಣೆಯ ಪೂರ್ಣ ಪಾಠ ಇಂತಿದೆ.
ಉಡುಪಿ ಜಿಲ್ಲೆಯ ಮಲ್ಪೆ, ಕೋಟ,ಹಿರಿಯಡ್ಕ,ಉಡುಪಿ ಟೌನ್, ಮಣಿಪಾಲ,ಬ್ರಹ್ಮಾವರ,ಶಿರ್ವ, ಹಾಗೂ ಇತರ ಪೊಲೀಸ್ ಠಾಣೆಯಲ್ಲಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ದೂರು ದಾಖಲಾಗಿದೆ.

ದೂರುಗಳಲ್ಲಿ ಮೂರು ವಿಧದಲ್ಲಿ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದು ಹೋರಾಟ ಮುಂದಿನ ದಿನದಲ್ಲಿ ತೀವ್ರಗೊಳ್ಳಲಿದ್ದು ಸಾಲಗಾರ ಸಂತ್ರಸ್ತರ ಪರವಾಗಿ ನಾವು ಮತ್ತು ನಮ್ಮ ನಾಯಕರು ಜೊತೆ ನಿಂತೆ ನಿಲ್ಲುತ್ತೇವೆ ಎಂದು ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಬ್ಯಾಂಕಿನಿಂದ ಗ್ರಾಹಕರಿಗೆ ಮಾಡಿರುವ ಅನ್ಯಾಯವನ್ನು ಮುಚ್ಚಿ ಹಾಕಲು ಜಾತಿ ಸಮುದಾಯವನ್ನು ಎತ್ತಿ ಕಟ್ಟುವ ಹುನ್ನಾರ ನಡೆಯುತ್ತಿದ್ದು, ನಮ್ಮ ಸಮುದಾಯದ ಗೌರವಾನ್ವಿತರು ಇವರ ಮಾತನ್ನುನಂಬಿ ಬ್ಯಾಂಕಿನಿಂದ ಅನ್ಯಾಯವಾದವರಿಗೆ ಇನ್ನು ಮುಂದೇ ಹೆಚ್ಚಿನ ಅನ್ಯಾಯ ಆಗಬಾರದೆಂದು ನಮ್ಮ ಸಮುದಾಯದ ಗೌರವಾನ್ವಿತರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ.

ಈಗಾಗಲೇ ರಘುಪತಿ ಭಟ್ ಅವರು ಹೇಳಿಕೆಯಲ್ಲಿ ಸಹಿನ ಅವರು ಕೊಟ್ಟ ಪ್ರಕರಣಕ್ಕೆ ಸ್ಟೇ ತಂದಿರುವ ನೀವುಗಳು ರಿಯಾಜ್ ಮತ್ತು ಇಬ್ಬರು ಆರೋಪಿಗಳು ತಕ್ಷಣ ಸ್ಟೇಯನ್ನು ಹಿಂಪಡೆದು ಕೊಂಡು ತನಿಖೆಗೆ ಸಹಕರಿಸಿ ಎಂದು ವಿನಂತಿಸಿದ್ದಾರೆ. ಆದರೆ ಗೌರವವಿತವಾಗಿ ರಘುಪತಿ ಭಟ್ ಅವರಿಗೆ ಸಹಕರಿಸದೆ ಉದ್ರೇಕದ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವತ್ತು ಸ್ಟೇ ತಂದಿರುವ copy ಸಮೇತ ರಘುಪತಿ ಭಟ್ ಅವರು ಹಂಚಿಕೊಂಡು ತನ್ನ ಮಾತು ಮತ್ತು ಸತ್ಯವನ್ನು ಉಳಿಸಿಕೊಂಡಿದ್ದಾರೆ, ಹಾಗಾಗಿ ಒಂದು ಲೆಕ್ಕದಲ್ಲಿ ನಾನು ಸತ್ಯವಂತ ಎಂದು ಹೇಳುವವರ ಮುಖವಾಡ ಕಳಚಿ ಬಿದ್ದಂತೆ ಆಗಿದೆ. ಇನ್ನಾದರೂ ತಾವುಗಳು ತಂದಿರೋ ಸ್ಟೇ ಅನ್ನು ಸುಗಮ ಗೊಳಿಸಿ ತನಿಖೆಗೆ ಸಹಕರಿಸಿ,
ನಾನು ಎಂಬುದು ಬಿಟ್ಟು ಜನತೆಯ ಧ್ವನಿಯಾಗಿ ಎಂದು ಹೇಳುತ್ತೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದರು.