ಡೈಲಿ ವಾರ್ತೆ: 17/NOV/2024
ಕೆದಿಲ : ಸಿಡಿಲು ಬಡಿದು ಬಾಲಕ ಮೃತ್ಯು
ಬಂಟ್ವಾಳ : ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಕೆದಿಲ ಗ್ರಾಮದ ಮುರಿಯಾಜೆ ಎಂಬಲ್ಲಿ ಭಾನುವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತನನ್ನು ಸ್ಥಳೀಯ ನಿವಾಸಿ ಸುಭೋದ್ ಸಿ ಎಂಬವರ ಚಂದ್ರಹಾಸ (14) ಎಂದು ಹೆಸರಿಡಲಾಗಿದೆ.
ಬಾಲಕ ಕಲ್ಲಡ್ಕ ಶ್ರೀರಾಮ ಪೌಡಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು. ಇಂದು ಸಂಜೆ ಸುಭೋದ್ ಮನೆಯಂಗಳದಲ್ಲಿ ನಿಂತಿದ್ದಾಗ ಸಿಡಿಲಿನ ಶಾಕ್ ತಗಲಿದೆ ಎನ್ನಲಾಗಿದೆ. ಕೂಡಲೇ ಅವರನ್ನ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಗಿದೆ.
ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ, ಕೆದಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್ ವಾಲ್ತಾಜೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಭಾನುವಾರ ಸಂಜೆ ಬಂಟ್ವಾಳ, ವಿಟ್ಲ ಮಂಗಳೂರು, ಮೂಡುಬಿದ್ರೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸಿಡಿಲು ಮಿಂಚಿನ ಮಳೆಯಾಗಿದೆ.