ಡೈಲಿ ವಾರ್ತೆ: 24/NOV/2024

4th ನ್ಯಾಷನಲ್ ಒಪೆನ್ ವಾಟೆರ್ ಚಾಂಪಿಯನ್ಷಿಪ್ ನಲ್ಲಿ ಈಜಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಗುಂಡ್ಮಿ ಗೋಪಾಲ್ ಖಾರ್ವಿ

ಕೋಟ: ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರು, ಪಡುಬಿದ್ರೆಯಲ್ಲಿ ನಡೆದ ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಷನ್ (ರಿ) ಇವರು ಆಯೋಜಿಸಿದ ಸ್ವಿಮ್ಮಿಂಗ್ ಫೆಡೆರೇಷನ್ ಆಫ್ ಇಂಡಿಯಾ , 4th ನ್ಯಾಷನಲ್ ಒಪೆನ್ ವಾಟೆರ್ ಚಾಂಪಿಯನ್ಷಿಪ್ ನಲ್ಲಿ ಮಾಸ್ಟರ್ಸ್ 3 K.M. 00.51.04 ಅವಧಿಯಲ್ಲಿ ಈಜಿ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ
ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ. 2013 ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.

ಶ್ರೀ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರಿಗೆ ಭಾರತ ಮತ್ತು ಅಮೇರಿಕನ್ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಾದ “BEST SPORTS ACHIVER AWARD”* ಮತ್ತು
“CERTIFICATE OF EXCELLENCE AWARD ” ನೀಡಿ ಗೌರವಿಸಿದ್ದು, ಈ ಹಿಂದೆ ಗೋಪಾಲ್ ಖಾರ್ವಿಯವರು ಕರ್ನಾಟಕದ ಅತ್ಯುತ್ತಮ ಪ್ರಶಸ್ತಿಗಳಾದ ಕರ್ನಾಟಕ ರಾಜ್ಯೋತ್ಸವ , ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು, ರಾಜ್ಯ ಮಟ್ಟರ ಸಂದೇಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಇವರ ಈ ಸಾಧನೆಯನ್ನು ಮನಗಂಡ ರಾಜ್ಯ ಸರಕಾರವು ಕರ್ನಾಟಕದ ಕೊಂಕಣಿ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರ ಗೋಪಾಲ್ ಖಾರ್ವಿ* ಎಂಬ ಪಾಠವನ್ನು ಪ್ರಕಟಿಸಿರುವುದು ಅವರ ಸಾಧನೆಗೆ ಸಂದ ಅತ್ಯಂತ ಗೌರವಯುತ ಪ್ರಶಸ್ತಿಗಳೊಂದು.