


ಡೈಲಿ ವಾರ್ತೆ: 30/NOV/2024



ಉಡುಪಿ: ಸಾವಿನಲ್ಲೂ ಒಂದಾದ ದಂಪತಿ!
ಉಡುಪಿ : ಪತ್ನಿ ಸಾವನ್ನಪ್ಪಿದ ಮರುದಿನವೇ ಪತಿಯೂ ಸಾವನ್ನಪ್ಪಿದ್ದು ಇಬ್ಬರು ಸಾವಿನಲ್ಲೂ ಒಂದಾದ ಮನಕಲಕುವ ಹೃದಯ ವಿದ್ರಾವಕ ಘಟನೆ ನ. 29 ರಂದು ಶುಕ್ರವಾರ ಉದ್ಯಾವರದಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನ. 28 ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿಧನ ಹೊಂದಿದ್ದಾರೆ.
ಒಂದೇ ದಿನದ ಅಂತರದಲ್ಲಿ ತಂದೆ ತಾಯಿಯ ಅಗಲುವಿಕೆ ಮಕ್ಕಳಿಗೆ ಅತೀವ ದುಃಖ ತರಿಸಿದೆ. ಪುತ್ರ, ಪುತ್ರಿಯನ್ನು ದಂಪತಿ ಅಗಲಿದ್ದಾರೆ.